ETV Bharat / business

ವಾಯುಯಾನ ಸಂಸ್ಥೆಗಳಿಗೆ 85,120 ಕೋಟಿ ರೂ. ನಷ್ಟ:  ಅಪಾಯದಲ್ಲಿ 29 ಲಕ್ಷ ನೌಕರರು

ಏಷ್ಯಾ ಪೆಸಿಫಿಕ್​ನ ವಿಮಾನಯಾನ ಸಂಸ್ಥೆಗಳು ಅತಿದೊಡ್ಡ ಆದಾಯ ಕುಸಿತ ಅನುಭವಿಸಲಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ 8,58,800 ಕೋಟಿ ರೂ. (ಮಾರ್ಚ್ 24ರ ಅಂದಾಜಿನ ಪ್ರಕಾರ, ಮೈನಸ್ 6,68,800 ಕೋಟಿ ರೂ.) ಮತ್ತು 2019ಕ್ಕೆ ಹೋಲಿಸಿದರೆ ಪ್ರಯಾಣಿಕರ ಬೇಡಿಕೆಯಲ್ಲಿ ಶೇ 50ರಷ್ಟು ಕುಸಿತ (ಮಾರ್ಚ್ 24ರ ಅಂದಾಜಿನ ಪ್ರಕಾರ, ಮೈನಸ್ ಶೇ 37ರಷ್ಟು) ಕಂಡಿದೆ.

Airlines in India
ವಾಯುಯಾನ ಸಂಸ್ಥೆಗಳು
author img

By

Published : Apr 24, 2020, 3:41 PM IST

ನವದೆಹಲಿ: ಕೋವಿಡ್​-19 ಬಿಕ್ಕಟ್ಟಿನಿಂದಾಗಿ ಪ್ರಯಾಣಿಕರ ಬೇಡಿಕೆ ಶೇ 47ರಷ್ಟು ಕುಸಿದಿರುವುದರಿಂದ ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳು ಈ ವರ್ಷ 85,120 ಕೋಟಿ ರೂ. ಆದಾಯ ನಷ್ಟ ಅನುಭವಿಸುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಹೇಳಿದೆ.

ಐಎಟಿಎಯ ಇತ್ತೀಚಿನ ಅಂದಾಜಿನ ಅನ್ವಯ, ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿನ ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಪ್ರಯಾಣ ನಿರ್ಬಂಧಗಳಿಂದ ದೇಶದ ವಾಯು ಉದ್ಯಮದ ಪ್ರಭಾವವು ಹದಗೆಡುತ್ತಿದೆ ಎಂಬುದನ್ನು ಈ ಆದಾಯ ನಷ್ಟು ಸೂಚಿಸುತ್ತದೆ ಎಂದು ವ್ಯಾಖ್ಯಾನಿಸಿದೆ.

ಐಎಟಿಎಯು ಏಪ್ರಿಲ್ 14ರಂದು ನವೀಕರಿಸಿದ ನೂತನ ದತ್ತಾಂಶಗಳ ವಿಶ್ಲೇಷಣೆ ಬಿಡುಗಡೆ ಮಾಡಿದೆ. ಕೋವಿಡ್​-19 ಬಿಕ್ಕಟ್ಟು 2020ರಲ್ಲಿ ಜಾಗತಿಕ ವಿಮಾನಯಾನ ಪ್ರಯಾಣಿಕರ ಆದಾಯವು 2,386,400 ಕೋಟಿ ರೂ. ಇಳಿಯಲಿದೆ. ಇದು 2019ಕ್ಕೆ ಹೋಲಿಸಿದರೆ 55 ಪ್ರತಿಶತದಷ್ಟು ಕಡಿಮೆಯಾಗಲಿದೆ.

ಏಷ್ಯಾ ಪೆಸಿಫಿಕ್​ನ ವಿಮಾನಯಾನ ಸಂಸ್ಥೆಗಳು ಅತಿದೊಡ್ಡ ಆದಾಯ ಕುಸಿತ ಅನುಭವಿಸಲಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ 8,58,800 ಕೋಟಿ ರೂ. (ಮಾರ್ಚ್ 24ರ ಅಂದಾಜಿನ ಪ್ರಕಾರ, ಮೈನಸ್ 6,68,800 ಕೋಟಿ ರೂ.) ಮತ್ತು 2019ಕ್ಕೆ ಹೋಲಿಸಿದರೆ ಪ್ರಯಾಣಿಕರ ಬೇಡಿಕೆಯಲ್ಲಿ ಶೇ 50ರಷ್ಟು ಕುಸಿತ (ಮಾರ್ಚ್ 24ರ ಅಂದಾಜಿನ ಪ್ರಕಾರ, ಮೈನಸ್ ಶೇ 37ರಷ್ಟು) ಕಂಡಿದೆ.

ಪರಿಸ್ಥಿತಿ ಹದಗೆಡುತ್ತಿದೆ. ವಿಮಾನಯಾನಗಳು ಬದುಕುಳಿಯಲು ಕಠಿಣ ಸವಾಲಿಗಳು ಎದುರಾಗಲಿವೆ. ಎರಡನೇ ತ್ರೈಮಾಸಿಕದಲ್ಲಿ 4,63,600 ಕೋಟಿ ರೂ. ನಷ್ಟದೊಂದಿದೆಗೆ ದ್ರವ್ಯತೆ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಏಷ್ಯಾ-ಪೆಸಿಫಿಕ್‌ನ ಐಎಟಿಎಯ ಪ್ರಾದೇಶಿಕ ಉಪಾಧ್ಯಕ್ಷ ಕಾನ್ರಾಡ್ ಕ್ಲಿಫರ್ಡ್ ಹೇಳಿದರು.

ಈ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಸಾಕಷ್ಟು ಹಣದ ಹರಿವು ಇರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು ತುರ್ತಾಗಿ ಹೆಜ್ಜೆ ಹಾಕದಿದ್ದರೆ ಹೆಚ್ಚಿನ ನಷ್ಟ ಸಂಭವಿಸಲಿದೆ ಎಂದರು.

ಭಾರತ, ಇಂಡೋನೇಷ್ಯಾ, ಜಪಾನ್, ಮಲೇಷ್ಯಾ, ಫಿಲಿಪೈನ್ಸ್, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ಥಾಯ್ಲೆಂಡ್​​ ಅನ್ನು ಆದ್ಯತೆಯ ದೇಶಗಳಾಗಿ ಕ್ಲಿಫರ್ಡ್ ಗುರುತಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.