ETV Bharat / business

ಸೆಕೆಂಡ್‌ಗೆ 10 GB ವೇಗದ 5ಜಿ ಸ್ಪೆಕ್ಟ್ರಮ್​ಗೆ ದಿನಗಣನೆ: ₹ 4.98 ಲಕ್ಷ ಕೋಟಿಯ ಇ-ಹರಾಜಿಗೆ ಆಹ್ವಾನ - ದೂರಸಂಪರ್ಕ ಇಲಾಖೆ

₹ 4.98 ಲಕ್ಷ ಕೋಟಿ ರೂ. ಮೌಲ್ಯದ 8526 ಮೆಗಾ ಹರ್ಟ್ಜ್‌ ಸ್ಪೆಕ್ಟ್ರಮ್ ಖರೀದಿಸಲು ಆಸಕ್ತ ಕಂಪನಿಗಳು ಜನವರಿ 13ರೊಳಗೆ ತಮ್ಮ ಬಿಡ್‌ಗಳನ್ನು ಸಲ್ಲಿಸಬಹುದು. ಪ್ರಸ್ತಾವನೆಯ ಕೋರಿಕೆಯ ಮೆರೆಗೆ (ಆರ್‌ಎಫ್‌ಪಿ) ಜನವರಿ 24ರಂದು ಹಣಕಾಸಿನ ಬಿಡ್‌ ತೆರೆಯಲಾಗುವುದು ಎಂದು ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದೆ.

5G
5ಜಿ
author img

By

Published : Dec 13, 2019, 7:58 PM IST

ನವದೆಹಲಿ: ದೂರ ಸಂಪರ್ಕ ಇಲಾಖೆಯು 8526 ಮೆಗಾ ಹರ್ಟ್ಜ್‌ ಸಾಮರ್ಥ್ಯದ 5ಜಿ ತರಂಗಾಂತರ ಇ-ಹರಾಜಿಗೆ ಅರ್ಹ ಟೆಲಿಕಾಂ ಏಜೆನ್ಸಿಗಳಿಂದ ಬಿಡ್​ ಆಹ್ವಾನಿಸಿದೆ.

₹ 4.98 ಲಕ್ಷ ಕೋಟಿ ರೂ. ಮೌಲ್ಯದ 8526 ಮೆಗಾ ಹರ್ಟ್ಜ್‌ ಸ್ಪೆಕ್ಟ್ರಮ್ ಖರೀದಿಸಲು ಆಸಕ್ತ ಕಂಪನಿಗಳು ಜನವರಿ 13ರೊಳಗೆ ತಮ್ಮ ಬಿಡ್‌ಗಳನ್ನು ಸಲ್ಲಿಸಬಹುದು. ಪ್ರಸ್ತಾವನೆಯ ಕೋರಿಕೆಯ ಮೆರೆಗೆ (ಆರ್‌ಎಫ್‌ಪಿ) ಜನವರಿ 24ರಂದು ಹಣಕಾಸಿನ ಬಿಡ್‌ ತೆರೆಯಲಾಗುವುದು ಎಂದು ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದೆ.

ದೂರ ಸಂಪರ್ಕ ಇಲಾಖೆಯು 5ಜಿ ತರಂಗಾಂತರ ಇ-ಹರಾಜಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹರಾಜುದಾರರಿಗೆ 3+1 ವರ್ಷಗಳ ಸಾಮಾನ್ಯ ಅವಧಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. 3 ವರ್ಷಗಳ ನಂತರ ಅಗತ್ಯವಿದ್ದಲ್ಲಿ ಪರಸ್ಪರ ಒಪ್ಪಿಗೆ ಮೇಲೆ 1 ವರ್ಷ ವಿಸ್ತರಣೆಯನ್ನು ಒದಗಿಸುತ್ತದೆ "ಎಂದು ಆರ್‌ಎಫ್‌ಪಿ ಹೇಳಿದೆ.

ಆಯ್ಕೆಯಾದ ಏಜೆನ್ಸಿಯ ಅಗತ್ಯವಾದ ಬಿಡ್ಡಿಂಗ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸುವ್ಯವಸ್ಥಿತಗೊಳಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ನಂತರ ಹರಾಜನ್ನು 2020ರ ಜೂನ್-ಜುಲೈ ವೇಳೆಗೆ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸ್ಪೆಕ್ಟ್ರಮ್ ಹರಾಜು ನಡೆಸಲು ಕೇಂದ್ರ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿತ್ತು. ಆದರೆ, ಟೆಲಿಕಾಂ ಸಂಸ್ಥೆಗಳ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ) ಬಗೆಗಿನ ಸುಪ್ರೀಂಕೋರ್ಟ್‌ ಆದೇಶವು ವಿಳಂಬವಾಗಿದ್ದರಿಂದ ಹರಾಜು ಪ್ರಕ್ರಿಯೆ ಸಹ ತಡವಾಗಿ ಆರಂಭವಾಗುತ್ತಿದೆ.

ಪ್ರತಿ ಟೆಲಿಕಾಂ ವಲಯದಲ್ಲಿ 5ಜಿ ಹರಾಜಿಗೆ 3,300-3,400 ಮೆಗಾ ಹರ್ಟ್ಜ್‌ ಮತ್ತು 3,425-3,600 ಮೆಗಾ ಹರ್ಟ್ಜ್‌ ಬ್ಯಾಂಡ್ ನಡುವಿನ 275 ಮೆಗಾ ಹರ್ಟ್ಜ್‌ ಆವರ್ತನ ಲಭ್ಯವಿದೆ. ಡಿಒಟಿಯ ದೃಷ್ಟಿಯಲ್ಲಿ ಪ್ರಸ್ತುತ ಲಭ್ಯವಿರುವ ಈ ಸ್ಪೆಕ್ಟ್ರಮ್​ಗಳಲ್ಲಿ 5ಜಿ ಸೇವೆ ಆರಂಭಿಸಲು ಸಾಕು ಎಂದು ಹೇಳಲಾಗುತ್ತಿದೆ.

ಐಟಿಯು ಪ್ರಕಾರ, ಸಾಮಾನ್ಯವಾಗಿ 5ಜಿ ಅಪ್ಲಿಕೇಷನ್ ಸೆಕೆಂಡಿಗೆ 10 ಗಿಗಾಬಿಟ್ ವೇಗದಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಸೆಕೆಂಡಿಗೆ 20 ಗಿಗಾಬಿಟ್ ವೇಗದಲ್ಲಿ ಡೇಟಾ ರವಾನಿಸಬಹುದು. ಟೆಲಿಕಾಂ ವಲಯದ ತಜ್ಞರು ಪ್ರಕಾರ ಕಡಿಮೆ ಡೇಟಾ ವೇಗಕ್ಕೆ ಸುಮಾರು 320 ಮೆಗಾ ಹರ್ಟ್ಜ್‌ ಸ್ಪೆಕ್ಟ್ರಮ್ ಅಗತ್ಯವಿದೆ. ಹೆಚ್ಚಿನ ಡೇಟಾ ವೇಗಕ್ಕೆ ಸುಮಾರು 670 ಮೆಗಾ ಹರ್ಟ್ಜ್‌ ತರಂಗಾಂತರ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.