ನವದೆಹಲಿ: ಭಾರತದ ಮೂರನೇ ಒಂದು ಭಾಗದಷ್ಟು ಎಂಜಿನಿಯರಿಂಗ್ ಪದವೀಧರರು ಅಪೇಕ್ಷಿತ ವೇತನ ಪ್ಯಾಕೇಜ್‌ನಿಂದ ಹಿಡಿದು ಉದ್ಯೋಗ ಪ್ರಸ್ತಾಪದಂತಹ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷಾ ವರದಿಯೊಂದು ತಿಳಿಸಿದೆ.
ಕೇವಲ 27 ಪ್ರತಿಶತದಷ್ಟು ಪದವೀಧರರು ಮಾತ್ರ ಆಪೇಕ್ಷಿಸಿದಷ್ಟು ವೇತನ ಪ್ಯಾಕೇಜ್‌ನೊಂದಿಗೆ ಉದ್ಯೋಗ ಪಡೆಯುವ ವಿಶ್ವಾಸ ಹೊಂದಿದ್ದಾರೆ ಎಂದು ಐಪಿ ಚಾಲಿತ ಇನ್ಕ್ಯುಬೇಷನ್ ಲ್ಯಾಬ್ ಬ್ರಿಡ್ಜ್ಲ್ಯಾಬ್ಜ್ ಸೊಲ್ಯೂಷನ್ಸ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಪ್ರಸ್ತುತ ಪರಿಸ್ಥಿತಿಯನ್ನು ನೋಡಿದಾಗ ಸಮರ್ಥವಾದ ಕೌಶಲ್ಯದ ಅವಶ್ಯಕತೆಯಿದೆ. ಅದು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಒಂದು ಸ್ಥಾನ ಪಡೆಯಲು ಅಗತ್ಯವಾಗಿದೆ ಎಂಬುದನ್ನು ಖಚಿತಪಡಿಸುವುದಲ್ಲದೆ, ಶ್ರಮಕ್ಕೆ ಯೋಗ್ಯವಾದ ಪ್ಯಾಕೇಜ್ ಅನ್ನು ಸಹ ಪಡೆಯಲು ನೆರವಾಗುತ್ತೆ ಎನ್ನುತ್ತಾರೆ ಬ್ರಿಡ್ಜ್ಲ್ಯಾಬ್ಜ್ ಸೊಲ್ಯೂಷನ್ಸ್ ಸಿಇಒ ನಾರಾಯಣ್ ಮಹಾದೇವನ್.
ವಿವಿಧ ಎಂಜಿನಿಯರಿಂಗ್ ವಿಭಾಗಗಳಿಂದ ಬಂದ ಸುಮಾರು 1,000 ಅಭ್ಯರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಸುಮಾರು 76 ಪ್ರತಿಶತದಷ್ಟು ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲಿ ಸಕ್ರಿಯ ಪ್ಲೇಸ್‌ಮೆಂಟ್ ಸೆಲ್ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಉಳಿದವರು ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆ ನೀಡಿದ್ದಾರೆ.
ಹೆಚ್ಚಿನ ವಿದ್ಯಾರ್ಥಿಗಳು ಸಕ್ರಿಯ ಪ್ಲೇಸ್‌ಮೆಂಟ್ ಸೆಲ್ ಹೊಂದಿರುವುದನ್ನು ಒಪ್ಪಿಕೊಂಡರೂ ಪ್ರತಿಕ್ರಿಯಿಸಿದವರಲ್ಲಿ ಐದನೇ ಒಂದು ಭಾಗಕ್ಕಿಂತ ಸ್ವಲ್ಪ ಹೆಚ್ಚಿನರು ಮಾತ್ರ ಉದ್ಯೋಗವನ್ನು ಪಡೆಯಲು ಸಮರ್ಥರಾಗಿದ್ದಾರೆ ಎಂಬುದನ್ನು ಸಮೀಕ್ಷೆ ತಿಳಿಸಿದೆ.
ಶೇ 78.64ರಷ್ಟು ವಿದ್ಯಾರ್ಥಿಗಳಿಗೆ ಪ್ರಸ್ತುತ ಯಾವುದೇ ಉದ್ಯೋಗವಿಲ್ಲ ಎಂದು ಈ ಸಮೀಕ್ಷೆ ಸೂಚಿಸುತ್ತದೆ.