ETV Bharat / briefs

ರಾಸ್​ ಟೇಲರ್ ಅರ್ಧಶತಕ... ಬಾಂಗ್ಲಾ ವಿರುದ್ಧ ಕಿವೀಸ್​​​ಗೆ 2 ವಿಕೆಟ್​ಗಳ ರೋಚಕ ಜಯ - england

ಕಿಂಗ್​ಟನ್​ ಓವೆಲ್​ನಲ್ಲಿ ನಡೆದ 12ನೇ ಆವೃತ್ತಿಯ ವಿಶ್ವಕಪ್​ನ 9ನೇ ಪಂದ್ಯದಲ್ಲಿ ಬಾಂಗ್ಲದೇಶ ತಂಡವನ್ನು 2 ವಿಕೆಟ್​​ಗಳಿಂದ ಮಣಿಸಿದ ಕಿವೀಸ್​ ಉತ್ತಮ ರನ್​ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಐಸಿಸಿ
author img

By

Published : Jun 6, 2019, 8:05 AM IST

ಲಂಡನ್​: ಸ್ಪಿನ್​ ಬಲದಿಂದ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದಿದ್ದ ಬಾಂಗ್ಲಾ ಹುಲಿಗಳನ್ನು ನ್ಯೂಜಿಲೆಂಡ್​​​ ತಂಡ 2 ವಿಕೆಟ್​ಗಳಿಂದ ಮಣಿಸಿ ಸತತ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿದೆ.

ಕಿಂಗ್​ಟನ್​ ಓವೆಲ್​ನಲ್ಲಿ ನಡೆದ 12ನೇ ಆವೃತ್ತಿಯ ವಿಶ್ವಕಪ್​ನ 9ನೇ ಪಂದ್ಯದಲ್ಲಿ ಟಾಸ್ ​ಗೆದ್ದ ಕಿವೀಸ್​ ಬೌಲಿಂಗ್​ ಆಯ್ದುಕೊಂಡಿತ್ತು. ಬ್ಯಾಟಿಂಗ್​ ಇಳಿದ ಬಾಂಗ್ಲದೇಶ ಕಿವೀಸ್​ ಬೌಲರ್​ಗಳ ಎದುರು ರನ್ ​ಗಳಿಸಲು ಪರದಾಡಿ 244 ರನ್​ಗಳಿಗೆ ಸರ್ವಪತನ ಕಂಡಿತ್ತು.

ಆರಂಭಿಕರಾಗಿ ಕಣಕ್ಕಿಳಿದಿದ್ದ ತಮೀಮ್​ 24, ಸೌಮ್ಯ ಸರ್ಕಾರ್​ 25 ರನ್​ಗಳಿಸಲಷ್ಟೇ ಶಕ್ತರಾದರು. ನಂತರ ಬಂದ ಶಕಿಬ್ 64 ರನ್​ ಗಳಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಇವರಿಗೆ ಸಾಥ್​ ನೀಡಿದ ರಹೀಮ್​ 19, ಮಿಥುನ್​ 26, ಮಹಮ್ಮದುಲ್ಹಾ 20 ಹಾಗೂ ಕೊನೆಯಲ್ಲಿ ಅಬ್ಬರಿಸಿದ ಮೊಹಮ್ಮದ್​ ಸೈಫುದ್ದೀನ್​ 29 ರನ್​ ಗಳಿಸಿ 244 ರನ್​ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

World Cup 2019
ರಾಸ್​ ಟೇಲರ್​

ಕಿವೀಸ್​ ಪರ ಮಾರಕ ದಾಳಿ ಮಾಡಿದ ಮ್ಯಾಟ್​ ಹೆನ್ರಿ 4 ವಿಕೆಟ್​ ಪಡೆದರೆ, ಇವರಿಗೆ ಸಾಥ್​ ನೀಡಿದ ಬೌಲ್ಟ್​ 2, ಲಾಕಿ ಫರ್ಗ್ಯುಸನ್​, ಗ್ರ್ಯಾಂಡ್​ಹೋಮ್​ ಹಾಗೂ ಮಿಚೆಲ್​ ಸ್ಯಾಂಟ್ನರ್​ ತಲಾ ಒಂದು ವಿಕೆಟ್​ ಪಡೆದು ಬಾಂಗ್ಲಾ ತಂಡವನ್ನು 4 ಎಸೆತಗಳಿರುವಂತೆಯೇ ಆಲೌಟ್​ ಮಾಡಿದರು.

245 ರನ್​ಗಳ ಗುರಿ ಬೆನ್ನೆತ್ತಿದ ನ್ಯೂಜಿಲೆಂಡ್​ ತಂಡದ ಗಪ್ಟಿಲ್​ 25, ಮನ್ರೊ 24,ಕೇನ್​ ವಿಲಿಯಮ್ಸನ್​ 40, ರಾಸ್​ ಟೇಲರ್​ 82 , ನಿಶಾಮ್​ 25, ಗ್ರ್ಯಾಂಡ್​​ಹೋಮ್​ 15, ಸ್ಯಾಂಟ್ನರ್​ 17 ರನ್ ​ಗಳಿಸಿದರು . ಕಿವೀಸ್​ 47.1 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಈ ಪಂದ್ಯವನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ ಬಾಂಗ್ಲದೇಶ ತಂಡದ ಬೌಲರ್​ಗಳು 8 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರೂ ಗೆಲುವು ಕಿವೀಸ್​ ಪಾಲಾಯಿತು. ಶಕಿಬ್​ 2, ಮೆಹೆದಿ ಹಸನ್​ 2, ಮೊಹಮ್ಮದ್​ ಹುಸೇನ್​ 2, ಮೊಹಮ್ಮದ್​ ಸೈಫುದ್ದೀನ್​ 2 ವಿಕೆಟ್ ಪಡೆದು ಸೋಲಿನಲ್ಲೂ ಮಿಂಚಿದರು.

82 ರನ್ ​ಗಳಿಸಿದ ರಾಸ್ ಟೇಲರ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕಿವೀಸ್​ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು, ಬಾಂಗ್ಲಾದೇಶ ಆತಿಥೇಯ ಇಂಗ್ಲೆಂಡ್​ ತಂಡವನ್ನು ಎದುರಿಸಲಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.