ETV Bharat / briefs

ಅವರಿಬ್ಬರನ್ನು ಮತ್ತೆ ನೋಯಿಸಬೇಡಿ... ಇಂಗ್ಲೆಂಡ್​ ಅಭಿಮಾನಿಗಳಿಗೆ ಮನವಿ ಮಾಡಿಕೊಂಡ ಆಸೀಸ್​ ಕೋಚ್​

ಐಪಿಎಲ್​ ಮುಗಿದ ನಂತರ ಸೀದಾ ಇಂಗ್ಲೆಂಡ್​ಗೆ ಬಂದಿಳಿದಿರುವ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ಗಳಿಗೆ ಅಭ್ಯಾಸ ಪಂದ್ಯದ ವೇಳೆ ಮೈದಾನದಲ್ಲಿ ಇಂಗ್ಲೆಂಡ್​ ಪ್ರೇಕ್ಷಕರು ಚೀಟರ್​ ಚೀಟರ್​ ಎಂದು ಹಿಯಾಳಿಸಿರುವುದನ್ನು ಕೋಚ್​ ಲ್ಯಾಂಗರ್​ ಪ್ರಶ್ನಿಸಿದ್ದಾರೆ.

ಸ್ಮಿತ್​
author img

By

Published : Jun 1, 2019, 9:31 AM IST

ಬ್ರಿಸ್ಟೋಲ್​: ಬಾಲ್​ ಟ್ಯಾಂಪರಿಂಗ್ ಮಾಡಿದ ತಪ್ಪಿಗೆ ಸ್ಮಿತ್ - ವಾರ್ನರ್ ದೊಡ್ಡ ಬೆಲೆ ತೆತ್ತಿದ್ದಾರೆ, ಒಂದು ವರ್ಷ ಶಿಕ್ಷೆ ಅನುಭವಿಸಿ ನೊಂದಿದ್ದಾರೆ, ದಯವಿಟ್ಟು ಮೈದಾನದಲ್ಲಿ ಅವರಿಗೆ ಅಗೌರವ ತೋರಬೇಡಿ ಎಂದು ಆಸೀಸ್​ ಕೋಚ್​ ಜಸ್ಟಿನ್​ ಲ್ಯಾಂಗರ್​ ಇಂಗ್ಲೆಂಡ್​ ಅಭಿಮಾನಿಗಳಿಗೆ ಬೇಡಿಕೊಂಡಿದ್ದಾರೆ.

ಐಪಿಎಲ್​ ಮುಗಿದ ನಂತರ ಸೀದಾ ಇಂಗ್ಲೆಂಡ್​ಗೆ ಬಂದಿಳಿದಿರುವ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ಗಳು ಅಭ್ಯಾಸ ಪಂದ್ಯದ ವೇಳೆ ಮೈದಾನದಲ್ಲಿ ಪ್ರೇಕ್ಷಕರು ಚೀಟರ್​ ಚೀಟರ್​ ಎಂದು ಹಿಯಾಳಿಸಿದ್ದರು.

World Cup 2019
ಜಸ್ಟಿನ್​ ಲ್ಯಾಂಗರ್​

"ನಾವು ಇಲ್ಲಿಗೆ ಬರುವ ಮೊದಲು ಪ್ರೇಕ್ಷಕರು ಹಿಯಾಳಿಸುತ್ತಾರೆಂಬುದನ್ನ ತಿಳಿದಿದ್ದೆವು, ನಿಮಗೆ ಇಷ್ಟ ಬಂದ ಹಾಗೆ ನೀವು ನಡೆದುಕೊಳ್ಳಬಹುದು, ಆದರೆ, ಅದನ್ನು ಸ್ವೀಕರಿಸಲು ಅವರಿಬ್ಬರಿಗೆ ಅಷ್ಟು ಸುಲಭದ ಮಾತಲ್ಲ, ಅವರು ಮನುಷ್ಯರೇ ಎಂಬುದು ಕೂಡ ಸತ್ಯ. ನಾನು ಕೂಡ ಮಕ್ಕಳನ್ನು ಪಡೆದು ತಂದೆಯಾಗಿದ್ದೇನೆ, ಬಹಳಷ್ಟು ಸಮಯ ಆಟಗಾರರ ಜೊತೆ ಕಳೆದಿರುವುದರಿಂದ ಅವರನ್ನು ನನ್ನ ಮಕ್ಕಳೆಂದು ಭಾವಿಸುತ್ತೇನೆ" ಎಂದಿದ್ದಾರೆ. ​ ​

ಸ್ಮಿತ್, ವಾರ್ನರ್​ ತಪ್ಪು ಮಾಡಿದ್ದಾರೆ, ಅದಕ್ಕೆ ದೊಡ್ಡ ಶಿಕ್ಷೆ ಅನುಭವಿಸಿದ್ದಾರೆ. ಅವರು ಉತ್ತಮ ಕ್ರಿಕೆಟರ್​ಗಳು, ದಯವಿಟ್ಟು ಮೈದಾನದಲ್ಲಿ ಅಮಾನವೀಯವಾಗಿ ನಡೆದುಕೊಳ್ಳಬೇಡಿ, ಗೌರವದಿಂದ ಕಾಣಿ ಎಂದು ಇಂಗ್ಲೆಂಡ್​ ಪ್ರೇಕ್ಷಕರನ್ನು ಲ್ಯಾಂಗರ್​ ಕೇಳಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.