ಲಂಡನ್: ಭಾರತದ ಕ್ರಿಕೆಟ್ ತಂಡದ ರನ್ಮಷಿನ್ ಎಂದೇ ಖ್ಯಾತಿಯಾಗಿರುವ ನಾಯಕ ವಿರಾಟ್ ಕೊಹ್ಲಿಯ ವೇಗದ 8000 ರನ್ಗೆ ದಾಖಲೆ ಇಂದು ಹಾಶಿಮ್ ಆಮ್ಲ ಪಾಲಾಗುವ ಸಾಧ್ಯತೆ ಇದೆ.
ಈಗಾಗಲೆ ವೇಗದ 5,6, ಹಾಗೂ 7 ಸಾವಿರ ರನ್ಗಳ ಮೈಲಿಗಲ್ಲನ್ನು ವೇಗವಾಗಿ ಕೊಹ್ಲಿ ತಲುಪಿದರು. ಈ ದಾಖಲೆಗಳನ್ನು ಒಂದಾದ ಮೇಲೊಂದನ್ನು ದ.ಆಫ್ರಿಕಾದ ಹಾಶಿಮ್ ಆಮ್ಲ ಮುರಿದುಕೊಳ್ಳುತ್ತಾ ಬಂದಿದ್ದಾರೆ.
ಕೊಹ್ಲಿ 8000 ರನ್ಗಳ ದಾಖಲೆಯು ಇಂದು ಪತನವಾಗುವ ಸಾಧ್ಯತೆ ಇದೆ. ಕೊಹ್ಲಿ 8000 ಮೈಲಿಗಲ್ಲನ್ನು ತಲುಪಲು 175 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆಮ್ಲ 171 ಇನ್ನಿಂಗ್ಸ್ನಲ್ಲಿ 7910 ರನ್ಗಳಿಸಿದ್ದಾರೆ. ಆಮ್ಲಗೆ 8 ಸಾವಿರ ಗಡಿದಾಟಲು ಇನ್ನು 90 ರನ್ಗಳ ಅವಶ್ಯಕತೆಯಿದೆ. ಕೊಹ್ಲಿ ದಾಖಲೆ ಮುರಿಯಲು 4 ಇನ್ನಿಂಗ್ಸ್ಗಳಿದೆ.
ಆಮ್ಲ ಹೀಗಾಗಲೆ ವೇಗವಾಗಿ 2000, 3000, 4000, 5000,6000,7000 ಗಡಿಯನ್ನು ವೇಗವಾಗಿ ತಲುಪಿರುವ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದಲ್ಲದೆ ವೇಗವಾಗಿ 8000 ಗಡಿದಾಟಿದ ದ.ಆಫ್ರಿಕಾದ ಆಟಗಾರ ಎಂಬ ದಾಖಲೆಯೂ ಆಮ್ಲ ಪಾಲಾಗಲಿದೆ.