ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ರಾಜಕೀಯ ತಿಕ್ಕಾಟ ಮುಂದುವರಿದಿದೆ.
ಮಮತಾ ಬ್ಯಾನರ್ಜಿ, ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾದ ಬಳಿಕ ಮತ್ತೊಂದು ಮಹತ್ವದ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ' (ನೀತಿ) ಸಭೆಯಿಂದ ದೂರ ಉಳಿಯುತ್ತಿದ್ದಾರೆ.
ದೆಹಲಿಯಲ್ಲಿ ಜೂನ್ 15ರಂದು ನಡೆಯಲ್ಲಿರುವ ನೀತಿ ಆಯೋಗದ 5ನೇ ಸಭೆಯಲ್ಲಿ ನಾನು ಭಾಗವಹಿಸುತ್ತಿಲ್ಲ. ರಾಜ್ಯಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯ ಮಾಡುವಂತಹ ಹಣಕಾಸಿನ ಅಧಿಕಾರ, ನೀತಿ ಆಯೋಗದ ಹತ್ತಿರ ಇಲ್ಲ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ದೀದಿ ಉಲ್ಲೇಖಿಸಿದ್ದಾರೆ.
ನೀತಿ ಆಯೋಗ ಯಾವುದೇ ಹಣಕಾಸಿನ ಅಧಿಕಾರ ಹೊಂದಿಲ್ಲ.ರಾಜ್ಯ ಯೋಜನೆಗಳಿಗೆ ಬೆಂಬಲ ಸಿಗದಂಥ ಅಧಿಕಾರಿಗಳ ಸಭೆಯಲ್ಲಿ ಹಾಜರಾಗುವುದು ನಿಷ್ಪ್ರಯೋಜಕ ಎಂದು ತಮ್ಮ ಪತ್ರದಲ್ಲಿ ಟೀಕಿಸಿದ್ದಾರೆ.