ಮಂಗಳೂರು: ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಉತ್ತರಪ್ರದೇಶ ಮೂಲದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಉರ್ವಸ್ಟೋರ್ ನಲ್ಲಿ ಜರುಗಿದೆ.
ಉತ್ತರಪ್ರದೇಶ ಮೂಲದ ನಿವಾಸಿ, ಪ್ರಸ್ತುತ ನಗರದ ಉರ್ವಸ್ಟೋರ್ ವಾಸಿ ರಾಕೇಶ್ ಹೂಜಾ (29) ಎಂಬಾತನ ಪತ್ನಿ ಪ್ರೀತಿ (26) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಾಕೆ.
ರಾಕೇಶ್ ಹೂಜಾ ಹಾಗೂ ಪ್ರೀತಿ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ರಾಕೇಶ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬಿನ್ ಕ್ರೂ ಆಗಿ ನೌಕರಿ ಮಾಡುತ್ತಿದ್ದ.ಈ ಕಾರಣಕ್ಕಾಗಿ ಮಂಗಳೂರಿನ ಉರ್ವಾಸ್ಟೋರ್ ನಲ್ಲಿ ದಂಪತಿ ವಾಸವಿದ್ದರು. ವರದಕ್ಷಿಣೆಗಾಗಿ ಪತಿ ಪೀಡಿಸುತ್ತಿದ್ದ ಎಂಬ ದೂರು ಕೇಳಿಬಂದಿದೆ. ಈ ಬಗ್ಗೆ ಪ್ರೀತಿ ಕುಟುಂಬಸ್ಥರು ಉರ್ವಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.