ಹೈದರಾಬಾದ್: ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಇತ್ತೀಚಿನ ದಿನದಲ್ಲಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ನಟ ಹರ್ಷವರ್ಧನ್ ಕಪೂರ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಹರ್ಷ್ ವರ್ಧನ್ ಕಪೂರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ಗೆ ಸಂಬಂಧಿಸಿದ ವದಂತಿಯನ್ನು ಬಹಿರಂಗಪಡಿಸಲು ಕೇಳಲಾಯಿತು. ಆಗ ವಿಕ್ಕಿ ಮತ್ತು ಕತ್ರಿನಾ ಬಗ್ಗೆ ಉತ್ತರಿಸಿದ ಅವರು 'ಅವರಿಬ್ಬರು ಒಟ್ಟಿಗೆ ಇದ್ದಾರೆ, ಅದು ನಿಜ. ಆದರೆ, ಇದನ್ನು ಹೇಳಿದ್ದಕ್ಕಾಗಿ ನಾನು ತೊಂದರೆಯಲ್ಲಿ ಸಿಲುಕಲಿದ್ದೇನೆ? ನನಗೆ ಗೊತ್ತಿಲ್ಲ, ಅವರು ಇದರ ಬಗ್ಗೆ ಸಾಕಷ್ಟು ಮುಕ್ತರಾಗಿದ್ದಾರೆಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
2019ರಲ್ಲಿ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ಮುಂಬೈನಲ್ಲಿ ಡಿನ್ನರ್ಗೆ ಜೊತೆಯಾಗಿ ತೆರಳಿದ್ದು, ಈ ವೇಳೆ, ತೆಗೆದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ಇನ್ನು ಸದ್ಯ ಅಕ್ಷಯ್ ಕುಮಾರ್ ಅವರೊಂದಿಗೆ ರೋಹಿತ್ ಶೆಟ್ಟಿ ಅವರ ಸೂರ್ಯವಂಶಿ ಚಿತ್ರದಲ್ಲಿ ಕತ್ರಿನಾ ಕಾಣಿಸಿಕೊಳ್ಳಲಿದ್ದಾರೆ. ಅವರು ಇತ್ತೀಚಿಗೆಯಷ್ಟೇ ಕೊರೊನಾದಿಂದ ಗುಣಮುಖರಾಗಿದ್ದರು.
ಹಾಗೂ ವಿಕ್ಕಿ ಕೌಶಲ್ ಕೊನೆಯ ಬಾರಿಗೆ ಭೂತ್-1: ದಿ ಹಾಂಟೆಡ್ ಶಿಪ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ದಿ ಇಮ್ಮಾರ್ಟಲ್ ಅಶ್ವತ್ಥಾಮ, ಸರ್ದಾರ್ಚಿ ಉಧಮ್ ಸಿಂಗ್ ಮತ್ತು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರ ಜೀವನಚರಿತ್ರೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.