ರಾಂಚಿ: ಪಂಜಾಬ್ ವಿರುದ್ಧ ಪಂದ್ಯ ಮುಗಿಯುತ್ತಿದ್ದಂತೆ ತವರಿಗೆ ಮರಳಿರುವ ಧೋನಿ ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುವ ಮೂಲಕ ರಾಷ್ಟ್ರೀಯ ಕೆಲಸ ಹಾಗೂ ದೇಶದ ನಾಗರಿಕನಾಗಿ ಮತ ಹಾಕುವ ಮೂಲಕ ಮತದಾನ ಎಲ್ಲರ ಹಕ್ಕು, ಎಲ್ಲರೂ ಚಲಾಯಿಸಿ ಎಂದು ತಮ್ಮ ಪುತ್ರಿಯ ಮೂಲಕ ಸಂದೇಶ ಹೊರಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿರುವ ಧೋನಿ ನೇತೃತ್ವದ ಸಿಎಸ್ಕೆ ಭಾನುವಾರ 12 ನೇ ಐಪಿಎಲ್ನ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೆಣಸಾಡಿ ಪಂದ್ಯ ಸೋಲನುಭವಿಸಿದೆ. ಆದರೆ, ಪಂದ್ಯದ ನಂತರ ತವರಿಗೆ ತೆರಳಿ ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿಧೋನಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
- " class="align-text-top noRightClick twitterSection" data="
">
ಒಬ್ಬ ದೇಶವನ್ನು ಪ್ರತಿನಿಧಿಸುವ ಆಟಗಾರನಾಗಿ ತಮ್ಮ ರಾಷ್ಟ್ರೀಯ ಕೆಲಸವನ್ನು ಮುಗಿಸಿ, ಒಬ್ಬ ನಾಗರಿಕನಾಗಿ ಮತದಾನ ಮಾಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮತದಾನದ ನಂತರ ತಮ್ಮ ಮಗಳು ’ಜೀವಾ’ ಜೊತೆ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ" ಹೋಗಿ ನಮ್ಮ ಅಪ್ಪ-ಅಮ್ಮನ ಹಾಗೆ ಮತ ಚಲಾಯಿಸಿ"ಎಂದು ಜೀವಾ ಕ್ಯೂಟಾಗಿ ಹೇಳಿದ್ದಾಳೆ.
ಧೋನಿ ಈ ವಿಡಿಯೋ ಶೇರ್ ಮಾಡಿದ ಒಂದು ಗಂಟೆಯಲ್ಲಿ ಸುಮಾರು 17 ಲಕ್ಷಕ್ಕೂ ಹೆಚ್ಚಿನ ಜನರೂ ವೀಕ್ಷಣೆ ಮಾಡಿದ್ದಾರೆ.