ಹೈದರಾಬಾದ್: ಲಾಕ್‌ಡೌನ್ ನಿರ್ಬಂಧಗಳು ಸಡಿಲಗೊಂಡ ನಂತರ ಮುಂಬೈ ಕ್ರಮೇಣ ತನ್ನ ವೇಗದ ಕಾರ್ಯಗಳತ್ತ ಮುನ್ನುಗುತ್ತಿದೆ. ಇನ್ನು ಇದರ ಜೊತೆ ಬಾಲಿವುಡ್ ಪಾಪರಾಜಿಗಳು ನಗರದಲ್ಲಿ ತಾರೆಗಳ ಫೋಟೋ ಸೆರೆ ಹಿಡಿಯುವುದರಲ್ಲಿ ಮತ್ತೆ ನಿರತರಾಗಿದ್ದಾರೆ.
ನಟಿ ಸನ್ನಿ ಲಿಯೋನ್ ತನ್ನ ಮಕ್ಕಳೊಂದಿಗೆ ಮುಂಬೈನ ಅಂಧೇರಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರ ನಿರ್ಮಾಪಕ ಲವರಂಜನ್ ಅವರ ಕಚೇರಿಗೆ ನಟಿ ಕೃತಿ ಕರಬಂಧ ಆಗಮಿಸಿದ್ದರು. ಈ ನಟಿಯರ ಫೋಟೋಗಳು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.
- " class="align-text-top noRightClick twitterSection" data="
">
ಫಿಟ್ನೆಸ್ ಬಗ್ಗೆ ತೀವ್ರ ಕಾಳಜಿ ಹೊಂದಿರುವ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಜಿಮ್ ಹೊರಗೆ ನಿಂತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಇನ್ನು ಊರ್ವಶಿ ಅವರು ಮುಂಬರುವ ವೆಬ್ ಸರಣಿ ಇನ್ಸ್‌ಪೆಕ್ಟರ್ ಅವಿನಾಶ್ನಲ್ಲಿ ರಂದೀಪ್ ಹೂಡಾ ಜೊತೆಗೆ ಅಭಿನಯಿಸುತ್ತಿದ್ದಾರೆ. ಈ ನಟಿಯರ ಮುದ್ದಾದ ಚಿತ್ರಗಳು ಪಾಪರಾಜಿಗಳ ಕ್ಯಾಮೆರಾದಲ್ಲಿ ಸುಂದರವಾಗಿ ಸೆರಯಾಗಿದೆ.