ಮುಂಬೈ: ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಆಟಗಾರರ ಹಾಗೂ ಇತರೆ ಸಿಬ್ಬಂದಿಯ ಪತ್ನಿಯರು ಹಾಗೂ ಕುಟುಂಬಸ್ಥರಿಗೆ ಇಂಗ್ಲೆಂಡ್ನಲ್ಲಿ ಉಳಿದುಕೊಳ್ಳಲು ಕೇವಲ 15 ದಿನಗಳ ಮಾತ್ರ ಅವಕಾಶ ನೀಡಿದ್ದು, ಅದು ವಿಶ್ವಕಪ್ ಆರಂಭವಾದ 21 ದಿನಗಳ ನಂತರ ಇಂಗ್ಲೆಂಡ್ಗೆ ತೆರಳಲು ಬಿಸಿಸಿಐ ಅನುಮತಿ ನೀಡಿದೆ.
ವಿಶ್ವಕಪ್ ಮೇ 30 ರಿಂದ ಆರಂಭವಾಗಲಿದ್ದು ಭಾರತ ಜೂನ್ 5ರಂದು ದ. ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಕೊಹ್ಲಿ, ಧವನ್ ಹಾಗೂ ಧೋನಿ ಪತ್ನಿಯರು ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ತಂಡದ ಜೊತೆಯಲ್ಲೇ ತೆರಳಿದ್ದರು. ಈ ಸಂದರ್ಭದಲ್ಲಿ ಆಟಗಾರರ ಸೇರಿದಂತೆ 37 ಜನರಿಗೆ ಸೂಕ್ತ ಸೌಲಭ್ಯ ಒದಗಿಸಿತ್ತು. ಆದರೆ ಇದು ವಿಶ್ವಕಪ್ ಆಗಿರುವುದರಿಂದ ಪಾಸ್, ಹೋಟೆಲ್ ಕೊಠಡಿ, ಪ್ರಯಾಣದ ಸಮಸ್ಯೆಗಳನ್ನು ತಪ್ಪಿಸಲು ಬಿಸಿಸಿಐ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಜೂನ್ 5ರಂದು ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಹೀಗಾಗಿ ಜೂ.16ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಆಟಗಾರರ ಕುಟುಂಬ ಸದಸ್ಯರು ಗೈರಾಗಲಿದ್ದಾರೆ. ಆಸ್ಪ್ರೇಲಿಯಾ ಪ್ರವಾಸದ ವೇಳೆ ಎದುರಾದ ಹೋಟೆಲ್ ಕೊಠಡಿ, ಪ್ರಯಾಣ, ಪಂದ್ಯದ ಪಾಸ್ ಸೇರಿದಂತೆ ಹಲವು ಸಮಸ್ಯೆಗಳನ್ನು ತಪ್ಪಿಸಲು ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಬಿಸಿಸಿಐ ನಿರ್ಧಾರದಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜೂನ್ 16 ರಂದು ಕೊಹ್ಲಿಪಡೆ ಸೆಣಸಾಡಲಿದ್ದು, ಈ ಪಂದ್ಯದವನ್ನು ನೋಡುವ ಅವಕಾಶವನ್ನು ಆಟಗಾರರ ಕುಟುಂಬ ಮಿಸ್ ಮಾಡಿಕೊಳ್ಳಲಿದೆ.