ಶಿವಮೊಗ್ಗ : ನಗರದಲ್ಲಿಂದು ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಬೆಳ್ಳಂಬೆಳಗ್ಗೆ ಅಶೋಕ ನಗರದಲ್ಲಿ ರೋಡ್ ಶೋ ನಡೆಸಲಾಯಿತು. ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ರೋಡ್ ಶೋ ನಡೆಸಿದರು.
ರೋಡ್ ಶೋ ಪ್ರಾರಂಭಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇಬ್ಬರು ನಾಯಕರುಗಳು ಸಹ ಪುಷ್ಪ ನಮನ ಸಲ್ಲಿಸಿ ರೋಡ್ ಶೋ ಪ್ರಾರಂಭ ಮಾಡಿದರು.
ರೋಡ್ ಶೋ ನಲ್ಲಿ ನಾಯಕರುತೆರದ ವಾಹನದಲ್ಲಿ ಜನರಿಗೆ ಕೈ ಬಿಸುತ್ತಾ, ಪಕ್ಷಕ್ಕೆ ಮತ ಹಾಕುವಂತೆ ಕೈ ಮುಗಿಯುತ್ತಾ ಮತಯಾಚನೆ ಮಾಡಿದರು. ರೋಡ್ ಶೋ ನಲ್ಲಿ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯಿತು.