ಮುಂಬೈ: ಲಂಡನ್ನ ಓವೆಲ್ನಲ್ಲಿ ಭಾರತ-ಆಸ್ಟ್ರೇಲಿಯಾ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದರೆ,ಇತ್ತ ಪಾಕಿಸ್ತಾನದಲ್ಲಿ ಪಾಕ್ ಜರ್ಸಿಯ ಮೇಲೆ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಹೆಸರು ಬರೆಸಿಕೊಂಡು ರಸ್ತೆಯಲ್ಲೆಲ್ಲಾ ಸುತ್ತುತ್ತಿದ್ದಾನೆ.
ಸದ್ಯ ವಿಶ್ವಕ್ರಿಕೆಟ್ನಲ್ಲಿ ಯೂತ್ ಐಕಾನ್ ಆಗಿರುವ ಕೊಹ್ಲಿಗೆ ಭಾರತದಲ್ಲಷ್ಟೇ ಅಲ್ಲದೇ ಇಡೀ ವಿಶ್ವದಲ್ಲೇ ಅಭಿಮಾನಿ ಬಳಗವಿದೆ. ಇದೀಗ ವಿಶ್ವಕಪ್ ಜರುಗುತ್ತಿರುವ ಸಂದರ್ಭದಲ್ಲಿ ಭಾರತವನ್ನು ದ್ವೇಷಿಸುವ ಪಾಕಿಸ್ತಾನದಲ್ಲೇ ಕೊಹ್ಲಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ವಿಚಾರವನ್ನು ಸ್ವತಃ ಪಾಕಿಸ್ತಾನದ ಮಾಜಿ ನಾಯಕ ಯೂನಿಸ್ ಖಾನ್ ತಿಳಿಸಿದ್ದರು.
-
VIRAT on bike #Lahore #Roads #Canal #INDvAUS @imVkohli #CWC19 #CricketWorldCup2019 pic.twitter.com/RVgjEpICLv
— sohail imran (@sohailimrangeo) June 9, 2019 " class="align-text-top noRightClick twitterSection" data="
">VIRAT on bike #Lahore #Roads #Canal #INDvAUS @imVkohli #CWC19 #CricketWorldCup2019 pic.twitter.com/RVgjEpICLv
— sohail imran (@sohailimrangeo) June 9, 2019VIRAT on bike #Lahore #Roads #Canal #INDvAUS @imVkohli #CWC19 #CricketWorldCup2019 pic.twitter.com/RVgjEpICLv
— sohail imran (@sohailimrangeo) June 9, 2019
ಯೂನಿಸ್ ಖಾನ್ ಮಾತು ಇಂದು ನಿಜವಾಗಿದೆ. ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಲಾಹೋರ್ನಲ್ಲಿ ಕೊಹ್ಲಿ ಹೆಸರಿರುವ ಗ್ರೀನ್ ಟಿಶರ್ಟ್ ತೊಟ್ಟು ಇಂದು ಟೀಮ್ ಇಂಡಿಯಾ ಬೆಂಬಲಿಸಿದ್ದಾನೆ. ಈ ಪೊಟೋವನ್ನು ಕ್ರಿಕೆಟ್ ಅಂಕಿಅಂಶ ತಜ್ಞ ಮಜೆರ್ ಅರ್ಶಾದ್ ಎಂಬುವವರು ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, 'ಫೊಟೋ ಆಫ್ ದಿ ಡೇ' ಎಂದು ಬರೆದುಕೊಂಡಿದ್ದಾರೆ.
ಭಾರತ-ಪಾಕಿಸ್ತಾನದ ನಡುವೇ ಎಷ್ಟೇ ವೈರತ್ವವಿದ್ದರೂ, ಕ್ರಿಕೆಟ್ ವಿಚಾರಕ್ಕೆ ಬಂದಾಗ ಮಾತ್ರ ಎರಡು ದೇಶಗಳ ನಡುವಿನ ಕದನ ಆರೋಗ್ಯಕರವಾಗಿರುತ್ತದೆ. ಭಾರತದ ಎಷ್ಟೋ ಪ್ಲೇಯರ್ಗಳನ್ನು ಪಾಕಿಸ್ತಾನದಲ್ಲಿ, ಪಾಕ್ನ ಕ್ರಿಕೆಟರ್ಗಳನ್ನು ಭಾರತದಲ್ಲಿ ಗೌರವಿಸುವುದುಂಟು. ಈ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.