ನವದೆಹಲಿ: ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ( ಡಬ್ಲ್ಯುಎಫ್ಐ) ಕುಸ್ತಿ ಪಟುಗಳಾದ ವಿನೇಶ್ ಪೋಗಟ್ ಹಾಗೂ ಬಜರಂಗ್ ಪುನಿಯಾ ಅವರಿಗೆ ರಾಜೀವ್ ಖೇಲ್ರತ್ನ ನೀಡುವಂತೆ ಶಿಫಾರಸು ಮಾಡಿ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದೆ.
ಇನ್ನು ರಾಹುಲ್ ಅವರೆ, ಹರ್ಪ್ರೀತ್ ಸಿಂಗ್, ದಿವ್ಯಾ ಕಕರನ್ ಮತ್ತು ಪೂಜಾ ಧಂಡಾಗೆ ಅರ್ಜುನ್ ಪ್ರಶಸ್ತಿ ನೀಡುವಂತೆ ಹಾಗೂ ವಿರೇಂದ್ರ ಕುಮಾರ್, ಸುಜೀತ್ ಮಾನ್, ನರೇಂದ್ರ ಕುಮಾರ್ ಮತ್ತು ವಿಕ್ರಮ ಕುಮಾರ್ ದ್ರೋಣಾಚಾರ್ಯ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿದೆ.
-
Wrestling Federation of India (WFI) recommends Vinesh Phogat and Bajrang Punia for Rajeev Khel Ratna Award. pic.twitter.com/fZjGD67ifN
— ANI (@ANI) April 29, 2019 " class="align-text-top noRightClick twitterSection" data="
">Wrestling Federation of India (WFI) recommends Vinesh Phogat and Bajrang Punia for Rajeev Khel Ratna Award. pic.twitter.com/fZjGD67ifN
— ANI (@ANI) April 29, 2019Wrestling Federation of India (WFI) recommends Vinesh Phogat and Bajrang Punia for Rajeev Khel Ratna Award. pic.twitter.com/fZjGD67ifN
— ANI (@ANI) April 29, 2019
ಕಳೆದ ಎರಡು ವರ್ಷಗಳಲ್ಲಿ ಬಜರಂಗ್ ಪುನಿಯಾ, ವಿನೇಶ್ ಪೋಗಟ್ ಅತ್ಯದ್ಭುತ ಪ್ರದರ್ಶನದ ಮೂಲಕ ದೇಶಕ್ಕೆ ಗೌರವ ತಂದಿತ್ತಿದ್ದಾರೆ. ಇನ್ನು ಬಜರಂಗ್ ಕುಸ್ತಿ ಅಖಾಡದಲ್ಲಿ ವಿಶ್ವದ ನಂಬರ್ ಒನ್ ಆಟಗಾರನಾಗಿದ್ದಾನೆ. ಇತ್ತೀಚೆಗೆ ಏಷ್ಯನ ರೆಸ್ಲಿಂಗ್ ಚಾಂಪಿಯನ್ಶಿಪ್ ಮತ್ತು ಏಷ್ಯನ್ ಗೇಮ್ಸ್ ನಲ್ಲೂ ಪದಕಗಳ ಬೇಟೆಯಾಡಿದ್ದರು.
2020 ರ ಒಲಿಂಪಿಕ್ನಲ್ಲಿ ಕುಸ್ತಿಯಲ್ಲಿ ಒಂದು ಪದಕದ ಆಸೆಯನ್ನ ಭಾರತೀಯ ಕುಸ್ತಿ ಅಕಾಡೆಮಿ ಹೊಂದಿದೆ. ಇನ್ನು ವಿನೇಶ್ ಪೋಗಟ್ ಸಹ, ಏಷ್ಯನ್ ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಕೊಳ್ಳೆ ಹೊಡೆದಿದ್ದರು. ಏಷ್ಯನ್ ಗೇಮ್ಸ್ನಲ್ಲಿ ಪೊಗತ್ ಬಂಗಾರದ ಬೇಟೆಯಾಡಿದ್ದರು.