ಬೆಂಗಳೂರು: 'ಅಂತಾರಾಷ್ಟ್ರೀಯ ಯೋಗ ದಿನಾಚರಣೆ'ಗೂ ಒಂದು ದಿನ ಮುಂಚಿತವಾಗೇ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಲ್ಲರ ಗಮನ ಸೆಳೆದಿದ್ದಾರೆ.
70 ವರ್ಷ ವಯಸ್ಸಾಗಿರುವ ವಾಟಾಳ್ ನಾಗರಾಜ್ ಚಿರ ಯುವಕರಂತೆ ವಿವಿಧ ಆಸನಗಳನ್ನು ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆರೋಗ್ಯದ ಗುಟ್ಟು ಯೋಗ ಎಂಬುದನ್ನು ಈ ಮೂಲಕ ತೋರಿಸಿರುವ ಅವರು ನಾಡಿನ ಜನತೆಗೆ ಆರೋಗ್ಯ ಭಾಗ್ಯ ಲಭಿಸಬೇಕೆಂದು ಹಾರೈಸಿದರು.