ನ್ಯೂಯಾರ್ಕ್: ಅಮೆರಿಕಾದ ಬಾಸ್ಕೆಟ್ ಬಾಲ್ ಕೋಚ್ವೋರ್ವನಿಗೆ 180 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಜಡ್ಜ್ ಆದೇಶ ಹೊರಡಿಸಿದ್ದಾರೆ. 43 ವರ್ಷದ ಜಾರ್ಜ್ ಸ್ಟೇಪನ್ ವಿರುದ್ಧ ಮಕ್ಕಳನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವ ಆರೋಪವಿದೆ.
ಬಾಸ್ಕೆಟ್ ಬಾಲ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಾರ್ಜ್ ಸ್ಟೇಪನ್, ತನ್ನ ಬಳಿ ಕೋಚಿಂಗ್ಗಾಗಿ ಬರುವ ಮಕ್ಕಳೊಂದಿಗೆ ಅಹಸ್ಯವಾಗಿ ನಡೆದುಕೊಳ್ಳುವುದರ ಜತೆಗೆ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪವಿತ್ತು.
ಮಕ್ಕಳೊಂದಿಗೆ ಅಶ್ಲೀಲವಾಗಿ ನಡೆದುಕೊಳ್ಳುವ ಆರೋಪಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ದೂರು ಸಹ ದಾಖಲಾಗಿತ್ತು. ಜತೆಗೆ ಹಾಸ್ಟೆಲ್ನಲ್ಲಿ ಮಕ್ಕಳು ರಾತ್ರಿ ವೇಳೆ ಮಲಗಿದಾಗ ಅಲ್ಲಿನ ದೃಶ್ಯವಳಿಗಳನ್ನ ಹಿಡನ್ ಕ್ಯಾಮರಾದಲ್ಲಿ ಸೆರೆ ಹಿಡಿದು ಅವರಿಗೆ ಕಿರುಕುಳ ನೀಡಿದ್ದನಂತೆ. ಇದೀಗ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್ ಈ ತೀರ್ಪು ನಿಡಿದ್ದು, ಕಾಮುಕನನ್ನ ಕಂಬಿ ಹಿಂದೆ ತಳ್ಳುವಲ್ಲಿ ಯಶಸ್ವಿಯಾಗಿದೆ.