ETV Bharat / briefs

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು; ಮತದಾನದಿಂದ ದೂರ ಉಳಿದ ಭಾರತ - Russia’s suspension from the UN Human Rights Council

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಮಾನತುಗೊಳಿಸಿದೆ.

UN General Assembly suspends Russia from Human Rights Council
ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು
author img

By

Published : Apr 7, 2022, 10:10 PM IST

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ ರಷ್ಯಾವನ್ನು ಮಾನವ ಹಕ್ಕುಗಳ ಮಂಡಳಿಯಿಂದ ಅಮಾನತುಗೊಳಿಸಿದೆ. ಉಕ್ರೇನ್‌ನ ಬುಚಾದಲ್ಲಿ ನಾಗರಿಕರ ಹತ್ಯೆ ನಡೆದ ನಂತರ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಮೆರಿಕ​​​ ಮಂಡಿಸಿದ ಈ ನಿರ್ಣಯದ ಪರ 93 ಮತಗಳು ಬಂದಿದ್ದು, 24 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿವೆ. 58 ದೇಶಗಳು ಇದರಿಂದ ದೂರವೇ ಉಳಿದಿದ್ದವು. ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಲಿಯಿಂದ ರಷ್ಯಾವನ್ನು ಅಮಾನತುಗೊಳಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಮತ ದೊರೆತಿತ್ತು. ಇದೇ ವೇಳೆ ಭಾರತ ಮತದಾನದಿಂದ ದೂರ ಉಳಿದಿದೆ.

ಇದನ್ನೂ ಓದಿ: 'ಯಾರು ಹೇಳಿದ್ದು ಸಂಸತ್ತು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು?': ಶಶಿ ತರೂರ್‌ ಅವರನ್ನೊಮ್ಮೆ ನೋಡಿ!

ಕೀವ್ ಸುತ್ತಮುತ್ತಲಿನ ಬುಚಾ ಮತ್ತು ಇತರ ಪಟ್ಟಣಗಳಲ್ಲಿ ನಡೆದ ನಾಗರಿಕರ ಹತ್ಯೆಗೆ ರಷ್ಯಾ ಕಾರಣ ಎಂದು ಉಕ್ರೇನ್ ಆರೋಪಿಸಿದೆ. ಆದ್ರೆ ಇದನ್ನು ಮಾಸ್ಕೋ ನಿರಾಕರಿಸಿದೆ. ಈ ಘಟನೆ ಜಾಗತಿಕವಾಗಿ ರಷ್ಯಾ ಮೇಲೆ ಹೊಸ ನಿರ್ಬಂಧಗಳನ್ನು ಹೇರಲು ಕಾರಣವಾಗಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಾಗರಿಕ ಹತ್ಯೆಗೆ ನಾವು ಕಾರಣವಲ್ಲ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.