ಹಾಸನ: ಮುದ್ದು ಮುದ್ದಾದಚಿರತೆ ಮರಿಗಳು ಆಹಾರಕ್ಕಾಗಿ ಹಂಬಲಿಸುತ್ತಿದ್ದ ವೇಳೆ, ಕೆಲಸ ಮಾಡುತ್ತಿದ್ದ ಸ್ಥಳೀಯರೊಬ್ಬರು ಚಿರತೆ ಮರಿಗಳನ್ನು ನೋಡಿ ತಕ್ಷಣ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಚಿರತೆ ಮರಿಗಳ ರಕ್ಷಣೆ ಮಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಡಿವೈಎಸ್ಪಿ ಲಕ್ಷ್ಮೇಗೌಡರ ಸಲಹೆ ಮೇರೆಗೆ, ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ತಪಾಸಣೆಯಲ್ಲಿ ಒಂದು ಗಂಡು, ಒಂದು ಹೆಣ್ಣು ಚಿರತೆ ಮರಿ ಎಂದು ತಿಳಿದು ಬಂದಿದೆ.
ಅವುಗಳ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿಗೆ ಪತ್ರ ಬರೆದ ಹಿನ್ನೆಲೆ, ವಲಯ ಅರಣ್ಯಧಿಕಾರಿ ರಂಗಸ್ವಾಮಿ ಮರಿಗಳನ್ನು ವಶಕ್ಕೆ ಪಡೆದಿದ್ದು, ಬಳಿಕ ಮೈಸೂರು ಮೃಗಾಲಯಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ.