ETV Bharat / briefs

ತಂಬಾಕು, ಧೂಮಪಾನ ಸೇವನೆ... 2 ಕೋಟಿ ರೂ.ಗೂ ಅಧಿಕ ದಂಡ ವಸೂಲಿ - tobaco

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಧೂಮಪಾನ ಸೇವಿಸಿದವರಿಂದ 2 ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ತಂಬಾಕು ನಿಯಂತ್ರಿಸುವ ಬಗ್ಗೆ ಕೆಎಸ್ಆರ್​ಟಿಸಿ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ನಿಗಮದ ಭದ್ರತಾ ಜಾಗೃತಿ ನಿರ್ದೇಶಕ ಪಿ.ಎಸ್.ಹರ್ಷ ಹೇಳಿದರು.

ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ
author img

By

Published : May 31, 2019, 10:28 PM IST

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧವಿದ್ದರೂ ಕಾನೂನು ಉಲ್ಲಂಘಿಸುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಅಂತೆಯೇ ಕಳೆದ 6 ವರ್ಷದಲ್ಲಿ 1.31ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ದಂಡ ವಿಧಿಸಿದ್ದರಿಂದ, 2.62 ಕೋಟಿ ರೂ. ದಂಡ ವಸೂಲಾಗಿದೆ ಎಂದು ಕೆಎಸ್​ಆರ್​ಟಿಸಿ ನಿಗಮದ ಭದ್ರತಾ ಜಾಗೃತ ನಿರ್ದೇಶಕ ಪಿ.ಎಸ್.ಹರ್ಷ ತಿಳಿಸಿದರು.

bgl
ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ

ಇಲ್ಲಿನ ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಯುವ ಸಮೂಹ ಅದರ ವ್ಯಸನಿಗಳಾಗುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಸಂಸ್ಥೆಯು ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಪ್ರತಿ ದಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 1 ರಿಂದ 1.25 ಲಕ್ಷ ಜನ ಪ್ರಯಾಣಿಸುತ್ತಾರೆ.‌ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ, ಮಾರಾಟ, ಬಳಕೆಯನ್ನು ಸಂಪೂರ್ಣ ನಿಷೇಧಿಸಿಸಲಾಗಿದೆ. ಈ ಮೂಲಕ ಕಡಿವಾಣ ಹಾಕಲಾಗುತ್ತಿದೆ. ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿಯು ನಿಯಮ ಉಲ್ಲಂಘಿಸಿದಲ್ಲಿ 200 ರೂ. ದಂಡವನ್ನು ಸ್ಥಳದಲ್ಲಿಯೇ ವಿಧಿಸಲಾಗುತ್ತಿದೆ ಎಂದು ಹರ್ಷ ತಿಳಿಸಿದರು.

ದೇಶದ ಯಾವುದೇ ಸಾರಿಗೆ ನಿಗಮಗಳಲ್ಲಿ ಇಷ್ಟು ಕಟ್ಟುನಿಟ್ಟಾಗಿ ಧೂಮಪಾನ ನಿಷೇಧವನ್ನು ಜಾರಿಗೊಳಿಸಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

Intro:ಬಸ್ಸು ನಿಲ್ದಾಣಗಳಲ್ಲಿ ಧೂಮಪಾನ ಸೇವನೆ; ಆರು ವರ್ಷದಲ್ಲಿ 2ಕೋಟಿಗೂ ಅಧಿಕ ದಂಡ ವಸೂಲಿ..‌

ಬೆಂಗಳೂರು: ತಂಬಾಕು ಸೇವನೆ ಆರೋಗ್ಯ ಹಾನಿಕಾರಕ ಅಂತ ತಿಳಿದಿದ್ದರು, ಅದೆಷ್ಟು ಯುವಜನತೆ ತಂಬಾಕು ವ್ಯಸನಿಗಳಾಗುತ್ತಿದ್ದಾರೆ... ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವೆನೆ‌ ನಿಷೇಧ, ಹೀಗಿದ್ದರು ಯಾವುದೇ ಮುಲಾಜಿಲ್ಲದೇ ಎಲ್ಲಂದರಲ್ಲಿ ತಂಬಾಕು ಸೇವೆ ಮಾಡೋ ವ್ಯಸನಿಗಳ ಸಂಖ್ಯೆ ಹೆಚ್ಚಾಗಿ ಇದೆ..

ಅಂದಹಾಗೇ, ಕೆಎಸ್‌ಆರ್‌ಟಿಸಿ ಸಂಸ್ಥೆಯು ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದು, ಕಳೆದ ಆರು ವರ್ಷಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡುವವರಿಂದ ಅಂದಾಜು 1,31,223
ಪ್ರಯಾಣಿಕರಿಂದ ರೂ. 2,62,44,600 ಕೋಟಿಯಷ್ಟು ದಂಡವನ್ನು ವಿಧಿಸಿದೆ..

ಪ್ರತಿ ದಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 1 ರಿಂದ 1.25 ಲಕ್ಷ ಜನ ಪ್ರಯಾಣಿಸುತ್ತಾರೆ..‌ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ, ಮಾರಾಟ, ಬಳಕೆಯನ್ನು ಸಂಪೂರ್ಣ ನಿಷೇಧಿಸಿದ್ದು ಈ ಮೂಲಕ ಕಡಿವಾಣ ಹಾಕಲಾಗುತ್ತಿದೆ.. ಸದ್ಯ ಮಸೂದೆಯ ಪ್ರಕಾರ ಯಾವುದೇ ವ್ಯಕ್ತಿಯು ಈ ಕಾಯಿದೆಯನ್ನು
ಉಲ್ಲಂಘಿಸಿದಲ್ಲಿ ರೂ.200/- ದಂಡವನ್ನು ಸ್ಥಳದಲ್ಲಿಯೇ ವಿಧಿಸಲಾಗುತ್ತಿದೆ.

*ಧೂಮಪಾನ ತ್ಯಜಿಸುವಂತೆ ನಿಗಮದಿಂದಲ್ಲೂ ಅರಿವು ಕಾರ್ಯಕ್ರಮ*

ವಿಶ್ವ ತಂಬಾಕು ಮುಕ್ತ ದಿನಾಚರಣೆಯ ನಿಮಿತ್ತ
ತಂಬಾಕನ್ನು ದೂರವಿಡಿ - ನಿಮ್ಮ ಉಸಿರನ್ನು ಕಾಪಾಡಿ” ಎಂಬ ಕಾರ್ಯಕ್ರಮವನ್ನೂ ಆಯೋಜಿಸಿತ್ತು.. ಸಿಗರೇಟು ಹಾಗೂ ತಂಬಾಕಿನ ಮೇಲೆ ನೀರನ್ನು ಸುರಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು..‌

ಪ್ರತಿವರ್ಷ ಭಾರತದಲ್ಲಿ 70 ಲಕ್ಷ ಜನರು ನೇರವಾಗಿ ತಂಬಾಕು ಸೇವನೆಗೆ 8 ರಿಂದ 10 ಲಕ್ಷ ಜನ Passive Smoking ನಿಂದ ಬಲಿಯಾಗುತ್ತಿದ್ದಾರೆ. ದಂಡ ವಿಧಿಸುವುದೊಂದೇ ಪರಿಹಾರ ವಲ್ಲವಾದರೂ, ಸಾರ್ವಜನಿಕರು ಹಾಗೂ ನಿಗಮದ ಸಿಬ್ಬಂದಿಗಳಲ್ಲಿ ಅರಿವು
ಮೂಡಿಸಲು ಇದು ಅವಶ್ಯಕವಾಗಿದೆ. ದೇಶದಲ್ಲಿ ಈವರೆಗೂ ಯಾವುದೇ ಸಾರಿಗೆ ನಿಗಮಗಳಲ್ಲಿ ಇಷ್ಟು ಕಟ್ಟುನಿಟ್ಟಾಗಿ ಧೂಮಪಾನ ನಿಷೇಧವನ್ನು ಜಾರಿಗೊಳಿಸಿರುವುದಿಲ್ಲ ಅಂತ ನಿಗಮದ ಭದ್ರತಾ ಜಾಗೃತ ನಿರ್ದೇಶಕರಾದ ಪಿ ಎಸ್ ಹರ್ಷ ತಿಳಿಸಿದರು..

ಇನ್ನು ವಿಶ್ವ ತಂಬಾಕು ಮುಕ್ತ ದಿನದ ಅಂಗವಾಗಿ ಕೆ ಎಸ್ ಆರ್ ಟಿಸಿ ನಿಲ್ದಾಣದ ಮಾರ್ಗ ಫಲಕಗಳಲ್ಲಿ Make everyday world no tabcoo day ಎಂಬ ಜಾಗೃತಿ ಸಂದೇಶ ಹಾಕಲಾಗಿತ್ತು..

KN_BNG_02_31_KSRTC_NO_TABCOO_DAY_SCRIPT_DEEPA_7201801

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.