ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕುರಿತು ಅಮೆರಿಕದ ಟೈಮ್ ಮ್ಯಾಗಜಿನ್ ವಿವಾದಿತ ವರದಿ ಪ್ರಕಟಿಸಿ, ಮೋದಿ ಓರ್ವ 'ಇಂಡಿಯಾಸ್ ಡಿವೈಡರ್ ಇನ್ ಚೀಫ್'( ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆ ನೀಡಿತ್ತು. ಇದೀಗ ಉಲ್ಟಾ ಹೊಡೆದಿರುವ ಇದೇ ಮ್ಯಾಗಜಿನ್, ನಮೋ ಗುಣಗಾಣ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲು ಮಾಡಿದ ಬಳಿಕ 'ಭಾರತವನ್ನ ಒಗ್ಗೂಡಿಸುವ ವಿಶ್ವದ ಪ್ರಬಲ ನಾಯಕ' ಎಂದು ಮ್ಯಾಗಜಿನ್ ಹೊಗಳಿದೆ. ತನ್ನ ಮ್ಯಾಗಜಿನ್ನಲ್ಲಿ ಮೋದಿ ಕುರಿತು ಲೇಖನವೊಂದನ್ನ ಪ್ರಕಟಿಸಿದ್ದು, ಅದರಲ್ಲಿ ಮೋದಿ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದು, ಈ ಹಿಂದಿನ ಪ್ರಧಾನಿಗಳಾರೂ ಈ ಕೆಲಸ ಮಾಡಿಲ್ಲ ಎಂಬ ಶೀರ್ಷಿಕೆ ನೀಡಿದೆ.
ಈ ಹಿಂದೆ ಇದೇ ಟೈಮ್ ಮ್ಯಾಗಜಿನ್ ತನ್ನ 20ರ ಸಂಚಿಕೆಯಲ್ಲಿ 'ಇಂಡಿಯಾಸ್ ಡಿವೈಡರ್ ಇನ್ ಚೀಪ್' ಎಂದು ತಲೆ ಬರಹ ನೀಡಿ ವಿಸ್ತೃತ ವಿಶೇಷ ವರದಿ ಪ್ರಕಟಿಸಿತ್ತು. ಅದರಲ್ಲಿ ಮೋದಿ ನೇತೃತ್ವದ ಬಿಜೆಪಿ, ಉದ್ದೇಶಪೂರ್ವಕವಾಗಿ ದೇಶದಲ್ಲಿ ಹಿಂದೂ-ಮುಸ್ಲೀಮರನ್ನು ವಿಭಜಿಸುತ್ತಿದೆ ಎಂದು ಆಪಾದಿಸಿತ್ತು.