ETV Bharat / bharat

ಜನನಿಬಿಡ ರಸ್ತೆಯಲ್ಲೇ ಯುವತಿಗೆ 10 ಬಾರಿ ಚಾಕುವಿನಿಂದ ಇರಿದು ಕಾಲ್ಕಿತ್ತ ಕಿಡಿಗೇಡಿ - WOMAN STABBED

ಆರೋಪಿ ಯುವಕ ಮತ್ತು ಯುವತಿ ಕಳೆದ ಎರಡೂವರೆ ವರ್ಷಗಳಿಂದ ಲಿವ್‌- ಇನ್ ಸಂಬಂಧ ಹೊಂದಿದ್ದರು. ಇತ್ತೀಚೆಗೆ ವೈಮನಸ್ಸು ಮೂಡಿ ಪರಸ್ಪರ ಬೇರೆಯಾಗಿದ್ದರು.

A man stabbed a woman broad daylight In Chandigarh
ಸಿಸಿಟಿವಿ ದೃಶ್ಯ (ETV Bharat)
author img

By ETV Bharat Karnataka Team

Published : Dec 18, 2024, 5:10 PM IST

ಚಂಢೀಗಡ: ಯುವಕನೊಬ್ಬ ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಯುವತಿಗೆ ಚಾಕುವಿನಿಂದ 10 ಬಾರಿ ಇರಿದು ಪರಾರಿಯಾದ ಘಟನೆ ಚಂಢೀಗಡದ ಸೆಕ್ಟರ್​ 25ರಲ್ಲಿ ಡಿ.17ರಂದು ನಡೆದಿದೆ. ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಂತ್ರಸ್ತೆಗೆ ಅಂದಾಜು 22 ವರ್ಷ ವಯಸ್ಸಾಗಿರಬಹುದು ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೊಲು ಅಲಿಯಾಸ್​ ಗಾಂಧಿ ಎಂಬಾತ ಈ ಕೃತ್ಯ ಎಸಗಿರುವ ಆರೋಪಿ. ಇಬ್ಬರೂ ಸೆಕ್ಷರ್​ 25ರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

"ಯುವತಿಯ ಪತಿ ಈ ಹಿಂದೆ ಸಾವನ್ನಪ್ಪಿದ್ದರು. ಕಳೆದೆರಡು ತಿಂಗಳಿನಿಂದ ಯುವತಿ ಆರೋಪಿಯೊಂದಿಗೆ ಸಹಜೀವನ ನಡೆಸುತ್ತಿದ್ದರು. ಕಳೆದ ಎರಡೂವರೆ ವರ್ಷಗಳಿಂದ ಸಂಬಂಧ ಹೊಂದಿದ್ದ ಇವರ ನಡುವೆ ಇತ್ತೀಚೆಗೆ ಮನಸ್ತಾಪ ಮೂಡಿ ಪ್ರತ್ಯೇಕಗೊಂಡಿದ್ದರು" ಎಂದು ಪೊಲೀಸ್​ ಅಧಿಕಾರಿ ಸುರಿಂದರ್​ ಕುಮಾರ್ ಮಾಹಿತಿ ನೀಡಿದ್ದಾರೆ.

ಯುವತಿ ತನ್ನನ್ನು ತೊರೆದ ಕೋಪದಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

"ಯುವತಿಯ ಕುತ್ತಿಗೆ, ಹೊಟ್ಟೆ ಭಾಗಗಳಲ್ಲಿ ಆಳವಾದ ಗಾಯಗಳಾಗಿವೆ. ಆಕೆ ಸದ್ಯ ಪೊಲೀಸರಿಗೆ ಹೇಳಿಕೆ ನೀಡುವ ಪರಿಸ್ಥಿತಿಯಲ್ಲಿಲ್ಲ" ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಹುಷಾರ್​!! ಚಾರ್ಜಿಂಗ್​ ವೇಳೆ ಮೊಬೈಲ್​ ಬ್ಲಾಸ್ಟ್​, ಯಮನೊಂದಿಗೆ ಹೋರಾಡಿ ಬದುಕುಳಿಯದ ಯುವತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.