ಮೈಸೂರು: ಶಾಲೆ ಮುಗಿಸಿ ಮನೆಗೆ ಬಾರದೆ ಆಟ ಆಡಲು ಹೋಗಿದ್ದ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೆ.ಸಿ. ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ನಿನ್ನೆ ಸಂಜೆ ಶಾಲೆ ಮುಗಿಸಿದ ಬಳಿಕ ಮಕ್ಕಳು ಮನೆಗೆ ಹಿಂದಿರುಗದೇ ಬಸ್ ನಿಲ್ದಾಣದ ಬಳಿ ಇರುವ ಮೈದಾನದಲ್ಲಿ ಆಟವಾಡುತ್ತಿದ್ದರು. ಆಟದ ಮುಗಿಸಿ ಮನೆಗೆ ಬರದೆ ಆದಿತ್ಯ ಅರಸ್ (13), ಪ್ರದೀಪ್ (11) ಮತ್ತು ಪವನ್ (10) ಈ ಮೂವರು ವಿದ್ಯಾರ್ಥಿಗಳು ನಿನ್ನೆ ಸಂಜೆಯಿಂದಲೇ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡಿರುವ ಪೋಷಕರು ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.