ಮೈಸೂರು: ಮತ್ತು ಬರಿಸುವ ನಿಷೇಧಿತ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಮೆಡಿಕಲ್ ಶಾಪ್ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಮೂವರನ್ನು ಬಂಧಿಸಿರುವ ಘಟನೆ ಕೆ.ಆರ್.ನಗರ ಪಟ್ಟಣದಲ್ಲಿ ನಡೆದಿದೆ.
ಕೆ.ಆರ್. ನಗರ ಪಟ್ಟಣದ ಬಾಲಾಜಿ ಮೆಡಿಕಲ್ ಶಾಪ್ನಲ್ಲಿ ನಿಷೇಧಿತ ಮತ್ತು ಬರುವ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕು ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆ ನಿಷೇಧಿತ ಮಾತ್ರೆಗಳು ದೊರಕಿದ್ದು ಈ ಸಂಬಂಧ ಮೆಡಿಕಲ್ ಮಾಲೀಕ ಶಿವಕುಮಾರ್ ಈತನ ಜೊತೆಗೆ ಮಾರಾಟಕ್ಕೆ ಸಹಕರಿಸುತ್ತಿದ್ದ ಶ್ರೀಕಂಠ ಮತ್ತು ರಾಜೇಶ್ ಎಂಬುವರನ್ನು ಬಂಧಿಸಲಾಗಿದೆ.
ಅಬಕಾರಿ ಡಿಸಿ. ಡಾ.ಮಾಹಾದೇವಿ ಭಾಯಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ಸಂಬಂಧ ಕೆ.ಆರ್.ನಗರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.