ಅಹಮದಾಬಾದ್,(ಗುಜರಾತ್) : ಮೊದಲ ಬಾರಿಗೆ ಮತದಾನದ ಹಕ್ಕು ಪಡೆದ ಯುವಕರು ಮರೆಯದೆ ತಮ್ಮ ಹಕ್ಕು ಚಲಾಯಿಸುವಂತೆ ಐಎಎಸ್ ಆಫೀಸರ್‌ವೊಬ್ಬರು ಪೋಸ್ಟ್‌ಕಾರ್ಡ್ ಮೂಲಕ ಮತ ಜಾಗೃತಿ ನಡೆಸಿದ್ದಾರೆ.
ಈಗ ದೇಶಾದ್ಯಂತ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದ ಯುವಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆ ಎಲ್ಲ ಯುವಕರಿಗೆ ಮತದಾನದ ಮಹತ್ವ ತಿಳಿಸೋದಕ್ಕಾಗಿ ಮತ್ತು ತಪ್ಪದೇ ಮತದಾನ ಮಾಡುವಂತೆ ಗುಜರಾತ್‌ನ ಅಹಮದಾಬಾದ್ ಜಿಲ್ಲಾಧಿಕಾರಿ ವಿಕ್ರಂ ಪಾಂಡೆ ಪೋಸ್ಟ್‌ಕಾರ್ಡ್ ಮೂಲಕ ಜಾಗೃತಿ ನಡೆಸಿದ್ದಾರೆ.
'ಅಹಮದಾಬಾದ್‌ನಲ್ಲಿ ಇದೇ ಮೊದಲ ಬಾರಿಗೆ ಹೊಸದಾಗಿ 1.1 ಲಕ್ಷ ಯುವಕರ ಹೆಸರು ಮತದಾರರ ಪಟ್ಟಿ ಸೇರಿವೆ. ಏಪ್ರಿಲ್ 23ರಂದು ನಡೆಯುವ ಮತದಾನದ ವೇಳೆ ಅವರೆಲ್ಲರೂ ಬಂದು ತಮ್ಮ ಹಕ್ಕು ಚಲಾಯಿಸುವಂತೆ ಪೋಸ್ಟ್‌ಕಾರ್ಡ್ ಮೂಲಕ ಮನವಿ ಮಾಡಲಾಗಿದೆ. ಅಹಮದಾಬಾದ್‌ನಲ್ಲಿರುವ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳ ಮೂಲಕ ಈ ಪೋಸ್ಟ್‌ಕಾರ್ಡ್‌ಗಳನ್ನ ಬರೆಯಿಸಲಾಗಿದೆ. ಯಾವುದೇ ಕಾರಣಕ್ಕೂ ಇದರಲ್ಲಿ ಯಾವುದೇ ಪಕ್ಷದ ಪರ ಮತ ಹಾಕಲು ಉತ್ತೇಜಿಸಿಲ್ಲ. ಪ್ರತಿ ಪೋಸ್ಟ್‌ಕಾರ್ಡ್‌ನ ಪರಿಶೀಲಿಸಿದ ಮೇಲೆಯೇ ಅವುಗಳನ್ನ ಮತದಾರರ ವಿಳಾಸಕ್ಕೆ ಕಳುಹಿಸಲಾಗಿದೆ ಅಂತಾ ಜಿಲ್ಲಾಧಿಕಾರಿ ವಿಕ್ರಂ ಪಾಂಡೆ ಹೇಳಿದ್ದಾರೆ.
ಗುಜರಾತ್ ವೃತ್ತ ಅಂಚೆ ಇಲಾಖೆಯ ನಿರ್ದೇಶಕ ಸುನೀಲ್ ಶರ್ಮಾ ಪೋಸ್ಟ್‌ಕಾರ್ಡ್ ಮತಜಾಗೃತಿ ಅಭಿಯಾನಕ್ಕೆ ಬೆಂಬಲವಾಗಿ ನಿಂತಿದ್ದಾರೆ. 'ಮತದಾನದ ದಿನಾಂಕಕ್ಕೂ ಮೊದಲೇ ಯುವ ಮತದಾರರಿಗೆ ಪೋಸ್ಟ್‌ಕಾರ್ಡ್ ಆದಷ್ಟು ಬೇಗ ತಲುಪಲು ವಿಶೇಷ ವ್ಯವಸ್ಥೆ ಮಾಡಲಾಗಿದೆ' ಅಂತಾ ಸುನೀಲ್ ಶರ್ಮಾ ಹೇಳಿದ್ದಾರೆ.