ETV Bharat / briefs

ನಗದು ದೋಚಿ ಪರಾರಿಯಾಗಿದ್ದ ಕಳ್ಳರು ಪೊಲೀಸರ ಬಲೆಗೆ - kannada news

ಈಚೆಗೆ ನಂದಿನಿ ಹಾಲಿನ ವಾಹನ ತಡೆದು ದರೋಡೆ ಮಾಡಿದ್ದ ಆರೋಪಿಗಳನ್ನು ಶಹಬಾದ ನಗರ ಪೊಲೀsರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲ್ಲೆ ನಡೆಸಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸ್​ರು ಬಂಧಿಸಿರುವುದು
author img

By

Published : Jun 4, 2019, 12:33 PM IST

ಕಲಬುರಗಿ: ಈಚೆಗೆ ನಂದಿನಿ ಹಾಲಿನ ವಾಹನ ತಡೆದು ದರೋಡೆ ಮಾಡಿದ್ದ ಆರೋಪಿಗಳನ್ನು ಶಹಬಾದ ನಗರ ಪೊಲೀsರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

klb
ಹಲ್ಲೆ ನಡೆಸಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು

ಕಲಬುರಗಿಯ ಪರಮೇಶ್ವರ್ ಹಡಪದ್, ಸಿದ್ದೇಶ್ವರ್ ಮುದ್ದಡಗಿ, ಧನರಾಜ್ ರಾಥೋಡ್, ಅಕ್ಷಯ ರತ್ನಾಕರ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕೆಎಂಎಫ್ ಘಟಕದ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ಮಾಡಿ ಮೇ 17ರಂದು ಶಹಾಬಾದ್​ಯಿಂದ ಕಲಬುರಗಿಗೆ ಬರುತ್ತಿದ್ದ ಕೆಎಂಎಫ್ ಘಟಕದ ಟೆಂಪೋವನ್ನು ಎರಡು ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಭಂಕೂರ್ ಕ್ರಾಸ್ ಬಳಿ ಅಡ್ಡಗಟ್ಟಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಹಣ ಇದ್ದ ಬ್ಯಾಗ್, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಶಹಾಬಾದ್ ಪೊಲೀಸರು, ನಂದೂರ್ (ಬಿ) ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಬೈಕ್, 5800 ರೂ. ನಗದು, ಮೊಬೈಲ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಆತನಿಂದ ಇತರೆ ಸ್ವತ್ತು ಜಪ್ತಿ ಮಾಡಿಕೊಳ್ಳುವುದು ಬಾಕಿ ಇದೆ ಎಂದು ಪಿಐ ಮಾಂತೇಶ್ ಸಜ್ಜನ್ ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Intro:ಕಲಬುರಗಿ: ನಂದಿನಿ ಹಾಲಿನ ವಾಹನ ತಡೆದು ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಶಹಬಾದ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರಗಿಯ ಪರಮೇಶ್ವರ್ ಹಡಪದ್, ಸಿದ್ದೇಶ್ವರ್ ಮುದ್ದಡಗಿ, ಧನರಾಜ್ ರಾಥೋಡ್, ಅಕ್ಷಯ ರತ್ನಾಕರ್ ಬಂದಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಎಂಎಫ್ ಘಟಕದ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ಮಾಡಿ ಮೇ 17 ರಂದು ಶಾಹಾಬಾದ್ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಕೆಎಂಎಫ್ ಘಟಕದ ಟೆಂಪೊವನ್ನು 2 ಬೈಕ್ ಮೇಲೆ ಬಂದು ಭಂಕೂರ್ ಕ್ರಾಸ್ ಬಳಿ ಅಡ್ಡಗಟ್ಟಿದ ಆರೋಪಿಗಳು, ಸಿಬ್ಬಂದಿಗಳ ಮೇಲೆ ಹಲ್ಲೆ ಎಸಗಿ ಒಂದು ಲಕ್ಷಕ್ಕೂ ಅಧಿಕ ನಗದು ಹಣ ಇದ್ದ ಬ್ಯಾಗ್ ಕಿತ್ತುಕೊಂಡು, ಸಿಬ್ಬಂದಿಗಳ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಶಹಾಬಾದ್ ಪೊಲೀಸರು, ನಂದೂರ್ (ಬಿ) ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂದಿತರಿಂದ ಎರಡು ಬೈಕ್, 5800 ನಗದು ಹಣ, ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ.

ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಜಾಲ ಬೀಸಲಾಗಿದೆ. ಆತನಿಂದ ಇತರೆ ಸ್ವತ್ತು ಜಪ್ತಿ ಮಾಡಿಕೊಳ್ಳುವುದು ಬಾಕಿ ಇದೆ ಎಂದು ಪಿ ಐ ಮಾಂತೇಶ್ ಸಜ್ಜನ್ ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.Body:ಕಲಬುರಗಿ: ನಂದಿನಿ ಹಾಲಿನ ವಾಹನ ತಡೆದು ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಶಹಬಾದ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರಗಿಯ ಪರಮೇಶ್ವರ್ ಹಡಪದ್, ಸಿದ್ದೇಶ್ವರ್ ಮುದ್ದಡಗಿ, ಧನರಾಜ್ ರಾಥೋಡ್, ಅಕ್ಷಯ ರತ್ನಾಕರ್ ಬಂದಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಎಂಎಫ್ ಘಟಕದ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ಮಾಡಿ ಮೇ 17 ರಂದು ಶಾಹಾಬಾದ್ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಕೆಎಂಎಫ್ ಘಟಕದ ಟೆಂಪೊವನ್ನು 2 ಬೈಕ್ ಮೇಲೆ ಬಂದು ಭಂಕೂರ್ ಕ್ರಾಸ್ ಬಳಿ ಅಡ್ಡಗಟ್ಟಿದ ಆರೋಪಿಗಳು, ಸಿಬ್ಬಂದಿಗಳ ಮೇಲೆ ಹಲ್ಲೆ ಎಸಗಿ ಒಂದು ಲಕ್ಷಕ್ಕೂ ಅಧಿಕ ನಗದು ಹಣ ಇದ್ದ ಬ್ಯಾಗ್ ಕಿತ್ತುಕೊಂಡು, ಸಿಬ್ಬಂದಿಗಳ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಶಹಾಬಾದ್ ಪೊಲೀಸರು, ನಂದೂರ್ (ಬಿ) ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂದಿತರಿಂದ ಎರಡು ಬೈಕ್, 5800 ನಗದು ಹಣ, ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ.

ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಜಾಲ ಬೀಸಲಾಗಿದೆ. ಆತನಿಂದ ಇತರೆ ಸ್ವತ್ತು ಜಪ್ತಿ ಮಾಡಿಕೊಳ್ಳುವುದು ಬಾಕಿ ಇದೆ ಎಂದು ಪಿ ಐ ಮಾಂತೇಶ್ ಸಜ್ಜನ್ ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.