ಕೊಪ್ಪಳ: ಲಡಾಖ್ನ ಭಾರತ-ಚೀನಾ ಗಡಿಯಲ್ಲಿ ಶತ್ರು ರಾಷ್ಟ್ರದ ಜೊತೆ ಸೆಣಸಾಡುವಾಗ ವೀರ ಮರಣವನ್ನಪ್ಪಿದ ಯೋಧರಿಗೆ ತಾಲೂಕಿನ ಬೆಟಗೇರಿ ಗ್ರಾಮದ ಯುವಕರು ಶ್ರದ್ಧಾಂಜಲಿ ಸಲ್ಲಿಸಿದರು.
ಗ್ರಾಮದ ಮೂಕಬಸವೇಶ್ವರ ದೇವಸ್ಥಾನದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಮೇಣದ ಬತ್ತಿ ಬೆಳಗುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.
ಸ್ವದೇಶಿ ಉತ್ಪನ್ನಗಳನ್ನು ಬಳಸುವುದರ ಮೂಲಕ ಚೀನಾದ ವಸ್ತುಗಳನ್ನು ತಿರಸ್ಕರಿಸಬೇಕು. ಚೀನಾದ ಮೊಬೈಲ್, ಆ್ಯಪ್ ಹಾಗೂ ವಸ್ತುಗಳನ್ನು ಬಳಸದಂತೆ ಪ್ರತಿಜ್ಞೆ ಮಾಡಲಾಯಿತು.
ಶಿವಪ್ರಸಾದ ಹಾರೋಗೇರಿ, ವೀರೇಶ್ ಸಜ್ಜನ್, ಶರಣಪ್ಪ ಮತ್ತೂರು, ಏಳುಕೋಟೇಶ ಕೊಮಲಾಪುರ, ಮಲ್ಲಪ್ಪ ಸಿಂಪಿ, ಯೋಗಾನಂದ ಬಡಿಗೇರ, ಉಮೇಶ ಹಟ್ಟಿ, ಹನುಮಂತ, ಅವಿನಾಶ, ಈರಜ್ಜ, ಮೇಘರಾಜ, ನಿಂಗಜ್ಜ ಹೂಗಾರ ಸೇರಿದಂತೆ ಮೊದಲಾದವರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.