ETV Bharat / briefs

ಗದ್ದೆಯಲ್ಲಿ ಕಂಡು ಬಂದಿರುವುದು ತೈಲ ರಿಫೈನರಿ ಆಯಿಲ್ ಅಲ್ಲ: ಎಂಆರ್ ಪಿಎಲ್ ಸ್ಪಷ್ಟನೆ - mangalore news

ಸೂರಿಂಜೆಯಲ್ಲಿನ ಭತ್ತದ ಗದ್ದೆಯಲ್ಲಿ ತೈಲ ಕಾಣಿಸಿಕೊಂಡ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆ ಸ್ಥಳ ಪರಿಶೀಲನೆ ಮಾಡಲಾಗಿದೆ.

The oil found in the chin is not a refinery oil

author img

By

Published : May 20, 2021, 10:23 PM IST

ಮಂಗಳೂರು: ನಗರದ ಸೂರಿಂಜೆ ಭತ್ತದ ಗದ್ದೆಯಲ್ಲಿ ಕಂಡು ಬಂದಿರುವ ತೈಲ ರಿಫೈನರಿ ಆಯಿಲ್ ಅಲ್ಲ ಎಂದು ಎಂಆರ್ ಪಿಎಲ್ ಸ್ಪಷ್ಟನೆ ನೀಡಿದೆ.

ಸೂರಿಂಜೆಯಲ್ಲಿನ ಭತ್ತದ ಗದ್ದೆಯಲ್ಲಿ ತೈಲ ಕಾಣಿಸಿಕೊಂಡ ಬಗ್ಗೆ ದೂರು ಬಂದಿತ್ತು. ಆದ್ದರಿಂದ ಎಂಆರ್ ಪಿಎಲ್ ಸಂಸ್ಥೆಯ ಪರಿಸರ ಇಂಜಿನಿಯರ್​​​​ಗಳು ಕೆಎಸ್‌ಪಿಸಿಬಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದಾರೆ.

ನಮ್ಮ ಸಂಸ್ಥೆಯ ಅವಲೋಕನಗಳ ಪ್ರಕಾರ ಇದು ಯಾವುದೋ ಜೈವಿಕ ಮೂಲಗಳಿಂದ ಆಗಿರುವ ಹಾಗೆ ಕಂಡು ಬರುತ್ತಿದೆ. ಗದ್ದೆಯಲ್ಲಿದ್ದ ತೈಲ ಮಾದರಿಯನ್ನು ಎಂಆರ್‌ಪಿಎಲ್ ಮತ್ತು ಕೆಎಸ್‌ಪಿಸಿಬಿ ತೆಗೆದುಕೊಂಡಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಎಂಆರ್ ಪಿಎಲ್ ಸ್ಪಷ್ಟಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.