ETV Bharat / briefs

ಸೈಟಿಗಾಗಿ ನಾದಿನಿಯನ್ನೇ ಕೊಲೆ ಮಾಡಿದ್ದ ಬಾವನ ಬಂಧನ - ನಾದಿನಿ

ಹಣದ ದುರಾಸೆಗೆ ನಾದಿನಿಯನ್ನೇ ಬಲಿ ತೆಗೆದುಕೊಂಡಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಸಂಗ್ರಹ ಚಿತ್ರ
author img

By

Published : Feb 21, 2019, 1:45 PM IST

ಬೆಂಗಳೂರು: ಒಂದು ಸೈಟ್ ವಿಚಾರದ ಕುರಿತು ಹಣದ ದುರಾಸೆಗೆ ನಾದಿನಿಯನ್ನೇ ಬಲಿ ತೆಗೆದುಕೊಂಡಿದ್ದ ಪಾಪಿ ಬಾವನ ಹೆಡೆಮುರಿಕಟ್ಟುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದೇ ತಿಂಗಳ 15ರಂದು ಅನುಷಾ ಎಂಬಾಕೆಯನ್ನು ಕೊಲೆ ಮಾಡಲಾಗಿತ್ತು. ಸದ್ಯ ಕೊಲೆಗಾರರ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಆರೋಪಿ ವಿವೇಕ್ ಬ್ಯುಸಿನೆಸ್ ಮಾಡಿ ಅದರಿಂದ ನಷ್ಟ ಅನುಭವಿಸಿದ್ದ. ತನ್ನ ಮನೆ ಮಠವನ್ನೆಲ್ಲಾ ಮಾರಿದ್ರು ದುಡ್ಡು ತೀರಿಸೊಕಾಗದೇ ಇರುವಷ್ಟು ಸಾಲ ಮಾಡಿಕೊಂಡಿದ್ದ. ಇದೇ ವೇಳೆ ನಾದಿನಿ ಅನುಷಾ ಬಿಡದಿ ಬಳಿ 13 ಲಕ್ಷ ರೂ. ಬೆಲೆ ಬಾಳುವ ಸೈಟೊಂದನ್ನ ಖರೀದಿಸಿದ್ದರು. ಹೀಗಾಗಿ ತನ್ನ ಸಾಲ ತೀರಿಸೋಕೆ ವಿವೇಕ್ ನಾದಿನಿ ಬಳಿ ಹಣ ಕೇಳಿದ್ದ. ಆದ್ರೆ ಆತನ ಮಾತಿಗೆ ಅನುಷಾ ಯಾವುದೇ ಕಾರಣಕ್ಕೂ ದುಡ್ಡು ಕೊಡಲ್ಲ ಎಂದು ಹೇಳಿ ಕಳುಹಿಸಿದ್ದಳು. ಇದರಿಂದ ರೊಚ್ಚಿಗೆದ್ದ್ದ ವಿವೇಕ್ ತನ್ನ ಸ್ನೇಹಿತರ ಜೊತೆಗೆ ಸೇರಿ ಕೊಲೆ ಮಾಡಲು ಸ್ಕೆಚ್ ರೂಪಿಸಿ ಮುಹೂರ್ತ ಫಿಕ್ಸ್​ ಮಾಡಿದ್ದ.

ಅದೇ ದಿನ ರಾತ್ರಿ ತನ್ನ ಸ್ನೇಹಿತರೊಂದಿಗೆ ಸೇರಿ ಹಗ್ಗದಿಂದ ಅವಳ ಕತ್ತನ್ನ ಹಿಸುಕಿ ಕೊಲೆ ಮಾಡಿ ಪಾರಾರಿಯಾಗಿದ್ರು. ಈ ಸಂಬಂಧ ತನಿಖೆ ಕೈಗೊಂಡಿದ್ದ ಕೆಂಗೇರಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ಬಿಯಾಗಿದ್ದು, ಪ್ರಮುಖ ಆರೋಪಿ ವಿವೇಕ್ ಹಾಗೂ ಥಾಯ್ ಹೇಲ್​ನನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Intro:Body:

Arrest_21_02_19

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.