ಬಳ್ಳಾರಿ: ಏಪ್ರಿಲ್ 26ರಂದು ಬಳ್ಳಾರಿ ಬಾಲಯ್ಯನವರು ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿರುವ ವಿಷಯ ತಿಳಿದ ತೆಲುಗಿನ ಖ್ಯಾತ ನಾಯಕ ನಟ ನಂದಮೂರಿ ಬಾಲಕೃಷ್ಣ ಅವರು ಅಂದೇ ಪೋನ್ ಕರೆ ಮಾಡಿ ಬಾಲಯ್ಯನವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಬಳ್ಳಾರಿ ಬಾಲಯ್ಯನವರ ಪುತ್ರನಾದ ತಾರಕ್ ಅವರ ಮೊಬೈಲ್ ಪೋನ್ಗೆ ಕರೆಮಾಡಿದ ನಂದಮೂರಿ ಬಾಲಕೃಷ್ಣ ಅವರು ಅಂದಾಜು ಐದು ನಿಮಿಷಗಳ ಕಾಲ ಮಾತನಾಡಿದ್ದಾರೆ. ಬಳ್ಳಾರಿ ಬಾಲಯ್ಯ ಶಿವೈಕ್ಯರಾದರು ಎಂದು ಗೊತ್ತಾಯಿತು. ಯಾವಾಗ? ಸಾವನ್ನ ಪ್ಪಿದರು. ನನಗೆ ಬಹಳ ನೋವಾಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನ ಹಾಕಿದ ನಂದಮೂರಿ ಬಾಲಕೃಷ್ಣ ಅವರು ಬಾಲಯ್ಯನವರ ಪುತ್ರ ತಾರಕನ ಬಳಿ ಮಾಹಿತಿ ಪಡೆದ್ರು.
![Bellary balayya](https://etvbharatimages.akamaized.net/etvbharat/prod-images/03:39:12:1620209352_kn-bly-4-telugu-actor-balakrishana-calling-balayya-families-7203310_05052021153325_0505f_1620209005_504.jpg)
ಬಳಿಕ, ಬಾಲಯ್ಯನವರ ಪತ್ನಿಯೊಂದಿಗೂ ಮಾತನಾಡಿದ ನಂದಮೂರಿ ಬಾಲಕೃಷ್ಣ ಅವರು, ನಿಮಗೆ ಮಕ್ಕಳೆಷ್ಟು? ಎಲ್ಲರಿಗೂ ಮದುವೆಯಾಗಿದೆಯಾ ಎಂಬುದರ ಕುರಿತೂ ಕೂಡ ಮಾಹಿತಿ ಕೇಳಿದಾಗ, ಎಲ್ಲರಿಗೂ ಮದುವೆಯಾಗಿದೆ. ಮೂವರು ಪುತ್ರಿಯರಿದ್ದು, ಒಬ್ಬ ಪುತ್ರಿ ಸಿರುಗುಪ್ಪದಲ್ಲಿ ಇರುತ್ತಾರೆ. ಇನ್ನಿಬ್ಬರು ಬಳ್ಳಾರಿಯಲ್ಲಿ ಇರುತ್ತಾರೆ. ಪುತ್ರನಿಗೂ ಮದುವೆಯಾಗಿದೆ ಎಂಬ ಮಾಹಿತಿಯನ್ನ ಬಾಲಯ್ಯ ಅವರ ಪತ್ನಿಯಿಂದ ನಾಯಕ ನಟ ಬಾಲಕೃಷ್ಣ ಪಡೆದುಕೊಂಡರು.
ಆಯ್ತು ನೀವೆಲ್ಲಾ ಧೈರ್ಯದಿಂದ ಇರಿ. ನಿಮ್ಮೊಂದಿಗೆ ನಾನಿದ್ದೇನೆ. ನನ್ನ ಅಭಿಮಾನಿಗಳೂ ಇದ್ದಾರೆ. ನಾನು ಬಳ್ಳಾರಿಗೆ ಬಂದಾಗ, ನಿಮ್ಮ ಮನೆಗೆ ಬರುವೆ. ನನ್ನ ಬೆಂಬಲ ನಿಮ್ಮ ಕುಟುಂಬಕ್ಕೆ ಸದಾ ಇರುತ್ತೆ. ಸುಖ- ದುಃಖಗಳ ನಡುವೆಯೇ ನಾವು ಜೀವನ ಸಾಗಿಸಲೇ ಬೇಕಿದೆ. ಅದು ಅನಿವಾರ್ಯ ಆಗಿಬಿಟ್ಟಿದೆ ಎಂದು ತೆಲುಗಿನ ಖ್ಯಾತ ನಾಯಕ ನಟ ನಂದಮೂರಿ ಬಾಲಕೃಷ್ಣ ಪೋನ್ ಕರೆಯನ್ನ ಕಟ್ ಮಾಡಿದ್ದಾರೆ.
ಬಳ್ಳಾರಿ ಬಾಲಯ್ಯ ಸಾವನ್ನಪ್ಪಿದ್ದು ಕೋವಿಡ್ ಸೋಂಕಿನಿಂದಲ್ಲ:
ಬಳ್ಳಾರಿ ಬಾಲಯ್ಯ ಸಾವನ್ನಪ್ಪಿರೋದು ಮಹಾಮಾರಿ ಕೋವಿಡ್ ಸೋಂಕಿನಿಂದಲ್ಲ. ವಿಪರೀತ ಮದ್ಯವ್ಯಸನಿಯಾಗಿದ್ದ ಬಾಲಯ್ಯಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 26 ರಂದು ಸಾವನ್ನಪ್ಪಿದ್ದಾರೆ. ವಿಮ್ಸ್ ಆಸ್ಪತ್ರೆಯ ವೈದ್ಯರು ಸಹಜ ಸಾವೆಂದು ಮರಣ ಪ್ರಮಾಣ ಪತ್ರ ವನ್ನೂ ಕೂಡ ನೀಡಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.