ಹೊಸಪೇಟೆ: ತಾಲೂಕಿನ ಕಾರಿಗನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕ ಕೊರೊನಾಗೆ ಬಲಿಯಾಗಿದ್ದಾರೆ.
ಸೈಯದ್ ಹುಸೇನ್ (50) ಮೃತ ಶಿಕ್ಷಕ. ಕಳೆದ ದಿನಗಳ ಹಿಂದೆ ಹುಸೇನ್ ಅವರಿಗೆ ಕೊರೊನಾ ಪಾಟಿಸಿವ್ ಕಂಡು ಬಂದಿತ್ತು. ಬಳಿಕ ಅವರನ್ನು ಕೊಪ್ಪಳ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಹುಸೇನ್ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಇಂಗ್ಲಿಷ್ ಶಿಕ್ಷಕನಾಗಿ ಸಾಹಿತ್ಯಾಸಕ್ತಿ ಹೊಂದಿದ್ದರು. ಹಾಗಾಗಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹುಡುಕಿಕೊಂಡು ಬಂದಿತ್ತು. ಅವರು ಮೂಲತಃ ಹೂವಿನ ಹಡಗಲಿಯವರಾಗಿದ್ದಾರೆ.