ETV Bharat / briefs

"ದಿ ಫ್ಯಾಮಿಲಿ ಮ್ಯಾನ್" ವಿವಾದ: ನಿರ್ಮಾಪಕರಿಂದ ಸ್ಪಷ್ಟನೆ - ದಿ ಫ್ಯಾಮಿಲಿ ಮ್ಯಾನ್ ಸುದ್ದಿ

ತಾವು ತಮಿಳು ಜನರ ಭಾವನೆಗಳನ್ನು ಗೌರವಿಸುತ್ತೇವೆ. ಎರಡನೇ ಸೀಸನ್ ನಲ್ಲಿ ಸೂಕ್ಷ್ಮ, ಸಮತೋಲಿತ ಮತ್ತು ರಿವರ್ಟಿಂಗ್ ಕಥೆ ಇರಲಿದೆ. ಈ ವೆಬ್ ಸರಣಿ ತಮಿಳು ಜನಸಮುದಾಯದ ಮನೋಭಾವನೆಗೆ ನೋವುಂಟು ಮಾಡುವ ದೃಶ್ಯಗಳನ್ನು ಹೊಂದಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಆದರೆ, ಅದು ತಪ್ಪು ಕಲ್ಪನೆ ಎಂದು ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್​ ಬಗ್ಗೆ ಉಂಟಾದ ಗೊಂದಲದ ಬಗ್ಗೆ ನಿರ್ಮಾಪಕರಾದ ರಾಜ್ ನಿದಿಮೋರ್ ಮತ್ತು ಕೃಷ್ಣ ಡಿಕೆ ಅವರು ಸ್ಪಷ್ಟನೆ ನೀಡಿದರು.

ದಿ ಫ್ಯಾಮಿಲಿ ಮ್ಯಾನ್ ಸುದ್ದಿ
ದಿ ಫ್ಯಾಮಿಲಿ ಮ್ಯಾನ್ ಸುದ್ದಿ
author img

By

Published : May 25, 2021, 6:10 PM IST

Updated : May 25, 2021, 7:40 PM IST

ನವದೆಹಲಿ: "ದಿ ಫ್ಯಾಮಿಲಿ ಮ್ಯಾನ್" ವೆಬ್ ಸಿರೀಸ್​ ಬಗ್ಗೆ ಉಂಟಾದ ಗೊಂದಲದ ಬಗ್ಗೆ ನಿರ್ಮಾಪಕರಾದ ರಾಜ್ ನಿದಿಮೋರ್ ಮತ್ತು ಕೃಷ್ಣ ಡಿಕೆ ಅವರು ಸ್ಪಷ್ಟನೆ ನೀಡಿದ್ದಾರೆ.

“ತಾವು ತಮಿಳು ಜನರ ಭಾವನೆಗಳನ್ನು ಗೌರವಿಸುತ್ತೇವೆ. ಎರಡನೇ ಸೀಸನ್​​​ನಲ್ಲಿ ಸೂಕ್ಷ್ಮ, ಸಮತೋಲಿತ ಮತ್ತು ರಿವರ್ಟಿಂಗ್ ಕಥೆ ಇರಲಿದೆ. ಈ ವೆಬ್ ಸರಣಿ ತಮಿಳು ಜನ ಸಮುದಾಯದ ಮನೋಭಾವನೆಗೆ ನೋವುಂಟು ಮಾಡುವ ದೃಶ್ಯಗಳನ್ನು ಹೊಂದಿದೆ ಎಂಬ ಆರೋಪಗಳು ಕೇಳಿಬಂದಿದೆ. ಆದರೆ ಅದು ತಪ್ಪು ಕಲ್ಪನೆ” ಎಂದಿದ್ದಾರೆ.

ಮನೋಜ್ ಬಾಜಪೇಯಿ ಮುಖ್ಯ ಪಾತ್ರಧಾರಿಯಾಗಿ ನಟಿಸಿರುವ "ದಿ ಫ್ಯಾಮಿಲಿ ಮ್ಯಾನ್" ಸೀಸನ್ 2 ಈ ವರ್ಷದ ಆರಂಭದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲು ಸಿದ್ದವಾಗಿತ್ತು. ಆದರೆ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ "ತಾಂಡವ್" ಮತ್ತು "ಮಿರ್ಜಾಪುರ್" ಸುತ್ತ ವಿವಾದಗಳೆದ್ದ ಕಾರಣ ಮುಂದೂಡಲ್ಪಟ್ಟಿತು. ಈಗ, ಚೆನ್ನೈನಲ್ಲಿ ನಿಗದಿಪಡಿಸಲಾಗಿರುವ ಎರಡನೆಯ ಸೀಸನ್ ಜೂನ್ 4 ರಂದು ಬಿಡುಗಡೆಯಾಗಲಿದೆ. ಇನ್ನು ಈ ಸಿರೀಸ್​ನಲ್ಲಿ ನಟಿ ಸಮಂತಾ ಅಕ್ಕಿನೇನಿ ಕೂಡ ಅಭಿನಯಿಸಿದ್ದಾರೆ.

ಇನ್ನು ತಮಿಳಿಗರ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿ ಕೆಲ ಸಂಘಟನೆಗಳು ಸರಣಿಯನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದವು. ಈಳಂ ತಮಿಳರನ್ನು ಹೆಚ್ಚು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿರುವ ಬಗ್ಗೆ ಐಟಿ ಸಚಿವ ಟಿ ಮನೋ ತಂಗರಾಜ್ ಕೇಂದ್ರಕ್ಕೆ ಪತ್ರ ಬರೆದಿದ್ದರು.

ಈ ಬಳಿಕ ಸ್ಪಷ್ಟನೆ ನೀಡಿರುವ ನಿರ್ಮಾಪಕರು, "ನಾವು ತಮಿಳು ಜನರ ಭಾವನೆಗಳನ್ನು ಗೌರವಿಸುತ್ತೇವೆ. ಟ್ರೇಲರ್ ಆಧರಿಸಿ ಅನಾವಶ್ಯಕ ವಿವಾದ ಮಾಡಬಾರದು. ಟ್ರೈಲರ್‌ನಲ್ಲಿನ ಒಂದೆರಡು ಶಾಟ್​ಗಳನ್ನು ಆಧರಿಸಿ ಕೆಲವು ತಪ್ಪಾದ ಕಲ್ಪನೆ ಮಾಡಲಾಗಿದೆ. ನಾವು ತಮಿಳು ಜನರ ಭಾವನೆಗಳನ್ನು ಮತ್ತು ಸಂಸ್ಕೃತಿಯನ್ನು ಬಹಳವಾಗಿ ತಿಳಿದಿದ್ದೇವೆ" ಎಂದು ಹೇಳಿದ್ದಾರೆ.

"ಇಡೀ ಸರಣಿಯನ್ನು ನೋಡಿದ ನಂತರ ಪ್ರೇಕ್ಷಕರು ಮೆಚ್ಚುವ ಭರವಸೆ ಇದೆ. ಹಲವಾರು ವರ್ಷಗಳ ಕಠಿಣ ಪರಿಶ್ರಮ ಹಾಕಿದ್ದೇವೆ. ಒಂದು ಸೀಸನ್​ನಲ್ಲಿರುವಂತೆ ಪ್ರೇಕ್ಷಕರಿಗೆ ಉತ್ಸಾಹಭರಿತ ಕಥೆ ತರಲು ನಾವು ಬಹಳ ಪರಿಶ್ರಮ ಪಟ್ಟಿದ್ದೇವೆ. ದಯವಿಟ್ಟು ಎಲ್ಲರೂ ಕಾಯುವಂತೆ ವಿನಂತಿಸುತ್ತೇವೆ. ಒಮ್ಮೆ ಬಿಡುಗಡೆಯಾದ ನಂತರ ಸರಣಿ ವೀಕ್ಷಿಸಿ ನಂತರ ನೀವು ಅದನ್ನು ಪ್ರಶಂಸಿಸುತ್ತೀರಿ ಎಂದು ನಮಗೆ ತಿಳಿದಿದೆ" ಎಂದು ಅವರು ಹೇಳಿದರು.

Last Updated : May 25, 2021, 7:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.