ETV Bharat / briefs

ಅನಿಲ್​ ಅಂಬಾನಿ ಕೇಸ್​...ಆದೇಶ ಪತ್ರ ತಿರುಚಿದ ಆರೋಪ: ಸುಪ್ರೀಂ ಕೋರ್ಟ್​ ಇಬ್ಬರು ಸಿಬ್ಬಂದಿ ವಜಾ, ಸೆರೆ

author img

By

Published : Apr 9, 2019, 9:41 AM IST

ವಂಚನೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್​ ಅಂಬಾನಿ ಕೋರ್ಟ್​ಗೆ ಖುದ್ದು ಹಾಜರಾಗಬೇಕಿತ್ತು. ಈ ಕುರಿತು ಸುಪ್ರೀಂ ಕೋರ್ಟ್​ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಹೊರಡಿಸಿದ್ದ ಆದೇಶವನ್ನು ತಿರುಚಲಾಗಿತ್ತು. ತಪ್ಪುಗಳನ್ನು ಮೂರು ದಿನಗಳ ನಂತರ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅನಿಲ್​ ಅಂಬಾನಿ

ನವದೆಹಲಿ: ಕಿರ್ಲೋಸ್ಕರ್​ ಸಂಸ್ಥೆಗೆ ವಂಚನೆ ಪ್ರಕರಣ ಸಂಬಂಧ ಉದ್ಯಮಿ ಅನಿಲ್​ ಅಂಬಾನಿಗೆ ಸುಪ್ರೀಂ ಕೋರ್ಟ್​ ಹೊರಡಿಸಿದ್ದ ನಿರ್ದೇಶನದ ಆದೇಶವನ್ನು ತಿರುಚುತ್ತಿದ್ದ ಪರಮೋಚ್ಛ ನ್ಯಾಯಾಲಯದ ಇಬ್ಬರು ಸಿಬ್ಬಂದಿಯನ್ನು ವಜಾಗೊಳಿಸಿದ್ದು, ಪೊಲೀಸರು ಬಂಧಿಸಿದ್ದಾರೆ.

ತಪನ್​ ಕುಮಾರ್​ ಚಕ್ರವರ್ತಿ ಹಾಗೂ ಮಾಸ್ಟರ್​ ಮಾನವ್​ ಶರ್ಮಾ ಬಂಧಿತರು. ಈ ಪೈಕಿ ಚಕ್ರವರ್ತಿ ತಲೆ ತಪ್ಪಿಸಿಕೊಂಡಿದ್ದ. ಆತನ ಮೊಬೈಲ್​ ಸಿಗ್ನಲ್​ಗಳನ್ನು ಪತ್ತೆ ಹಚ್ಚಿ ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.

ಇಬ್ಬರನ್ನೂ ಕೋರ್ಟ್​ಗೆ ಒಪ್ಪಿಸಲಾಗಿದ್ದು, ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಬಗ್ಗೆ ಅನುಮಾನ ದಟ್ಟೈಸಿದೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.