ಹೈದರಾಬಾದ್: ವಾರ್ನರ್ ಹಾಗೂ ಜಾನಿ ಬ್ಯಾರ್ಸ್ಟೋವ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಕೆಕೆಆರ್ ನೀಡಿದ 159 ರನ್ಗಳ ಗುರಿಯನ್ನು ಬೆನ್ನೆತ್ತಿದ ಹೈದರಾಬಾದ್ ಆರಂಭದಿಂದಲೇ ಅಬ್ಬರದ ಆಟಕ್ಕೆ ಮೊರೆ ಹೋಯಿತು. ಪವರ್ ಪ್ಲೇನಲ್ಲಿ ಆರಂಭಿಕರಿಬ್ಬರ ಆಟದ ಮುಂದೆ ಕೆಕೆಆರ್ ಬೌಲರ್ಗಳ ಆಟ ನಡೆಯಲಿಲ್ಲ. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 67 ರನ್ಗಳಿಸಿದರು. ಇದರಲ್ಲಿ 5 ಸಿಕ್ಸರ್ 3 ಬೌಂಡರಿ ಒಳಗೊಂಡಿತ್ತು. ವಾರ್ನರ್ ಇಂದೇ ತನ್ನ ಮೊದಲ ಪಂದ್ಯವಾಡಿದ ಯರ್ರ್ ಪೃಥ್ವಿರಾಜ್ಗೆ ವಿಕೆಟ್ ಒಪ್ಪಿಸಿದರು. ಆದರೆ, ಜಾನಿ ಬೈರ್ಸ್ಟೋವ್ ಮಾತ್ರ ತನ್ನ ಅಬ್ಬರದ ಆಟವನ್ನು ಮುಂದುವರಿಸಿ 43 ಎಸೆತಗಳಲ್ಲಿ 7 ಬೌಂಡರಿ 4 ಸಿಕ್ಸರ್ ಸಹಿತ 80 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಲಿಯಮ್ಸನ್ ಔಟಾಗದೆ 9 ರನ್ಗಳಿಸಿದರು.
-
That's that from Hyderabad. The @SunRisers win by 9 wickets with 5 overs to spare.#SRHvKKR pic.twitter.com/rRxwfYqmuU
— IndianPremierLeague (@IPL) April 21, 2019 " class="align-text-top noRightClick twitterSection" data="
">That's that from Hyderabad. The @SunRisers win by 9 wickets with 5 overs to spare.#SRHvKKR pic.twitter.com/rRxwfYqmuU
— IndianPremierLeague (@IPL) April 21, 2019That's that from Hyderabad. The @SunRisers win by 9 wickets with 5 overs to spare.#SRHvKKR pic.twitter.com/rRxwfYqmuU
— IndianPremierLeague (@IPL) April 21, 2019
ಕೆಕೆಆರ್ ರನ್ಗಳಿಸಲು ಪರದಾಡಿದ ಇದೇ ಪಿಚ್ನಲ್ಲಿ ಲೀಲಾಜಾಲವಾಗಿ ರನ್ಗಳಿಸಿದ ವಾರ್ನರ್ ಹಾಗೂ ಬ್ಯಾರ್ಸ್ಟೋವ್ ಮೊದಲ ವಿಕೆಟ್ಗೆ 12.2 ಓವರ್ಗಳಲ್ಲಿ 131 ರನ್ಗಳ ಸೂರೆಗೈದರು. 15 ಓವರ್ಗಳಲ್ಲಿ ಕೆಕೆಆರ್ ನೀಡಿದ್ದ 159 ರನ್ಗಳ ಗುರಿಯನ್ನು ತಲುಪಿ ಅಂಕಪಟ್ಟಿಯಲ್ಲಿ 4 ನೇ ಸ್ಥಾನಕ್ಕೆ ಲಗ್ಗೆ ಇಟ್ಟರು.
ಇದಕ್ಕು ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕೆಕೆಆರ್ ಕ್ರಿಸ್ ಲಿನ್(51) ಅವರ ಅರ್ಧಶತಕದ ನೆರವಿನಿಂದ 158 ರನ್ಗಳಿಸಿತ್ತು. ಆದರೆ, ಇವರಿಗೆ ಉಳಿದ ಯಾವುದೇ ಬ್ಯಾಟ್ಸ್ಮನ್ಗಳ ಬೆಂಬಲ ಸಿಗದಿದ್ದರಿಂದ ಬೃಹತ್ ಮೊತ್ತ ದಾಖಲಿಸುವಲ್ಲಿ ಕೆಕೆಆರ್ ವಿಫಲವಾಯಿತು. ರಿಂಕು ಸಿಂಗ್ 30 ರನ್ಗಳಿಸಿ ತಂಡದ ಮೊತ್ತ 150 ದಾಟುವಂತೆ ಮಾಡಿದರು.
-
Well played, Jonny 💪💪#SRH pic.twitter.com/37MpfzJ6np
— IndianPremierLeague (@IPL) April 21, 2019 " class="align-text-top noRightClick twitterSection" data="
">Well played, Jonny 💪💪#SRH pic.twitter.com/37MpfzJ6np
— IndianPremierLeague (@IPL) April 21, 2019Well played, Jonny 💪💪#SRH pic.twitter.com/37MpfzJ6np
— IndianPremierLeague (@IPL) April 21, 2019
ಹೈದರಾಬಾದ್ ಪರ ಖಲೀಲ್ ಅಹ್ಮದ್(3 ವಿಕೆಟ್) ಸುನಿಲ್ ನರೈನ್, ಗಿಲ್ ಹಾಗೂ ಕ್ರಿಸ್ ಲಿನ್ ವಿಕೆಟ್ ಪಡೆದರೆ, ಭುನೇಶ್ವರ್ ನಿತೀಸ್ ರಾಣಾ ಹಾಗೂ ರಸೆಲ್ ವಿಕೆಟ್ ಪಡೆದುಕೊಂಡರು. ಇವರಿಗೆ ಬೆಂಬಲ ನೀಡಿದ ಸಂದೀಪ್ ಶರ್ಮಾ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಗೆಲುವಿನೊಂದಿಗೆ ಹೈದರಾಬಾದ್ 10 ಅಂಕಗಳೊಂದಿಗೆ 4 ನೇ ಸ್ಥಾನಕ್ಕೇರಿತು. ಕೋಲ್ಕತಾ ನೈಟ್ರೈಡರ್ಸ್ 6ನೇ ಸ್ಥಾನಕ್ಕೆ ಕುಸಿಯಿತು. ಒಟ್ಟಾರೆ ಹೈದರಾಬಾದ್ 9 ಪಂದ್ಯಗಳಲ್ಲಿ 4 ಸೋಲು 5 ಗೆಲುವು ಪಡೆದರೆ, ಕೆಕೆಆರ್10 ಪಂದ್ಯಗಳಲ್ಲಿ 6 ಸೋಲು 4 ಗೆಲುವಿನೊಂದಿಗೆ ಪ್ಲೇ ಆಫ್ ಹಾದಿಯನ್ನ ದುರ್ಘಮಗೊಳಿಸಿಕೊಂಡಿತು.