ನ್ಯೂಯಾರ್ಕ್: 2018 ನೇ ಇಸವಿ... ಗೂಗಲ್ನ ಸಿಇಒ ಔನ್ನತ್ಯದಲ್ಲಿದ್ದ ಕಾಲವದು. ವಿಶ್ವದ ಅತ್ಯಂತ ವಿಶ್ವಾಸಾರ್ಹ ಹಾಗೂ ಖ್ಯಾತ ಸಿಇಒ ಎಂಬ ಹೆಗ್ಗಳಿಕೆ ಭಾರತ ಮೂಲದ ಸುಂದರ್ ಪಿಚೈ ಪಾಲಿಗೆ ಒಲಿದು ಬಂದಿತ್ತು.
ಆದರೆ, 12 ತಿಂಗಳುಗಳ ಕಾಲ ಚಕ್ರ ಉರುಳಿಹೋಗಿದೆ. ಸುಂದರ್ ಪಿಚೈ ತಮ್ಮ ಕಂಪನಿ ಗೂಗಲ್ನಲ್ಲಿ ಬಂದ ಲೈಂಗಿಕ ಕಿರುಕುಳ ಪ್ರಕರಣ ನಿಭಾಯಿಸುವಲ್ಲಿ ಎಡವಿದ್ದು, ಈ ಸಂಬಂಧ ಬಂದ ಟೀಕೆಗಳಿಂದಾಗಿ ಈ ಬಾರಿ ವಿಖ್ಯಾತ ಸಿಇಒಗಳ ಟಾಪ್ 10 ಪಟ್ಟಿಯಿಂದ ಹೊರ ಬಿದ್ದಿದ್ದಾರೆ.
ನಂಬರ್ ಒನ್ ಇರಲಿ 10ರಲ್ಲೂ ಸ್ಥಾನ ಪಡೆಯುವಲ್ಲಿ ಪಿಚೈ ವಿಫಲರಾಗಿದ್ದಾರೆ. ಇನ್ನು ಲಿಂಕ್ಡ್ಇನ್ ಸಿಇಒ ಮೈಕಲ್ ವೇನರ್ ಸಹ ಲಿಸ್ಟ್ನಿಂದ ಹೊರ ಬಿದ್ದಿದ್ದಾರೆ ಎಂದು ಪೋರ್ಬ್ಸ್ ವರದಿ ಹೇಳಿದೆ.
ಈ ಬಾರಿ ಅತ್ಯಂತ ವಿಶ್ವಾಸಾರ್ಹ ಹಾಗೂ ಖ್ಯಾತ ಸಿಇಒಗಳ ಲಿಸ್ಟ್ನಲ್ಲಿ ರಾಯಲ್ ಡಚ್ ಶೆಲ್ನ ಸಿಇಒ ಬೆನ್ ವಾನ್ ಬ್ಯೂರ್ಡನ್ ಮೊದಲ ಸ್ಥಾನ ಪಡೆದು ಎಲ್ಲ ಪ್ರತಿಷ್ಠಿತರನ್ನು ಹಿಂದಿಕ್ಕಿದ್ದಾರೆ.
ಇನ್ನು ಸುಂದರ್ ಅವರ ನಾಯಕತ್ವದ ಕೌಶಲ್ಯ ಗಣನೀಯ ಅಂಕಗಳನ್ನ ಕಳೆದುಕೊಂಡಿದ್ದು, 6.5 ಅಂಕ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಅವರ ರೆಪ್ಯೂಟೇಷನ್ ಸಹ 8.4 ಅಂಕಗಳಿಗೆ ಕುಸಿತ ಕಂಡಿದೆ.