ಆನಂದ್ (ಗುಜರಾತ್): ಕೊರೊನಾ ಜತೆಗಿನ ಹೋರಾಟದಲ್ಲಿ ಕ್ಯಾನ್ಸರ್ ಪೀಡಿತೆಯೊಬ್ಬರು ಗೆಲುವು ಕಂಡಿದಾರೆ. ಕ್ಯಾನ್ಸರ್ ಮತ್ತು ಮಧುಮೇಹದಿಂದ ಬಳಲುತ್ತಿರುವ 58 ವರ್ಷದ ಜಯಬೆನ್ ಬದುಕಿ ತೋರಿಸಿದ್ದಾರೆ. 24 ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದು, ಕೊನೆಗೂ ಕೊರೊನಾವನ್ನು ತಮ್ಮ ದೇಹದಿಂದ ಒದ್ದೋಡಿಸಿದ್ದಾರೆ.
ಖಂಭಾಟ್ ಪ್ರದೇಶದ ಮಹಿಳೆ ಕೊರೊನಾ ಗೆದ್ದಿದ್ದು. ಇತರರಿಗೆ ಕೊರೊನಾ ಭಯದ ನಿರ್ಮೂಲನೆಗೆ ಹೊಸ ಭರವಸೆ ಹುಟ್ಟು ಹಾಕಿದ್ದರೆ. ಕೋವಿಡ್ ಪಾಸಿಟಿವ್ ಬಂದ ನಂತರ ಜಯಬೆನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಆಕ್ಸಿಜನ್ ಮಟ್ಟವು ಕುಸಿದಿದ್ದರಿಂದ ವೆಂಟಿಲೇಟರ್ ಹಾಕಿ ಚಿಕಿತ್ಸೆ ನೀಡಲಾಯಿತು. 24 ದಿನ ವೆಂಟಿಲೇಟರ್‌ನಲ್ಲಿರಿಸಲಾಗಿತ್ತು. 45 ರಿಂದ 50 ಲೀಟರ್ ಆಮ್ಲಜನಕದ ಅಗತ್ಯವಿತ್ತು.
ಅದರಲ್ಲೂ ಮಧುಮೇಹ ಮಟ್ಟವು ಏರಿಕೆ ಕಂಡಿತ್ತು. ಇಷ್ಟಾದರೂ ಎಲ್ಲವನ್ನೂ ಜಯಿಸಿ ಈಗ ಇತರರಿಗೆ ಆಶಾಭಾವನೆ ಮೂಡುವಂತೆ ಮಾಡಿದ್ದಾರೆ ಜಯಬೆನ್.
ಕೋವಿಡ್ ಪಾಸಿಟಿವ್ ಬಂದರೆ ಭಯಪಡಬೇಡಿ, ಪರಿಸ್ಥಿತಿಯನ್ನು ಧೈರ್ಯ ಮತ್ತು ದೃಢವಾಗಿ ಎದುರಿಸಬೇಕು. ಸಕಾರಾತ್ಮಕ ಚಿಂತನೆಯು ಯಾವುದೇ ರೀತಿಯ ಕಾಯಿಲೆ ಗುಣಪಡಿಸುತ್ತದೆ.
ಸಾಂಕ್ರಾಮಿಕ ರೋಗದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಲು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ಜನರಿಗೆ ಸಲಹೆ ನೀಡಿದರು.
ಇವರು ಆರೋಗ್ಯವಾಗಲು ಪ್ರಮುಖ ಕಾರಣ ವೈದ್ಯರು. ಈಕೆಗೆ ಬೆಂಬಲ ಮತ್ತು ಶಕ್ತಿಯ ಮೂಲವಾಗಿ ಮುಂದುವರೆದರು. ಸಕಾರಾತ್ಮಕವಾಗಿ ಯೋಚಿಸಲು ಪ್ರೋತ್ಸಾಹಿಸಿದರು. ಈ ಕಾರಣಕ್ಕೆ ಜಯಬೆನ್ ಕೊರೊನಾದ ವಿರುದ್ಧ ಗೆದ್ದು, ಎದ್ದು ನಿಂತರು.