ETV Bharat / briefs

ಏನ್ರೀ ಎಲ್ಲಾ ಸರಿಯಿದೆಯಾ ಇಲ್ಲಿ... ಜಿಲ್ಲಾ ಆಸ್ಪತ್ರೆಗೆ ಶಾಸಕ ವೀರಣ್ಣ ಚರಂತಿಮಠ ದಿಢೀರ್ ಭೇಟಿ.. - ಸರ್ಕಾರಿ ಆಸ್ಪತ್ರೆ

ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಿಢೀರ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.

ಶಾಸಕ ಡಾ.ವೀರಣ್ಣ ಚರಂತಿಮಠ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಿಢೀರ ಭೇಟಿ ನೀಡಿದರು
author img

By

Published : Jun 2, 2019, 7:52 PM IST

ಬಾಗಲಕೋಟೆ : ನಗರದ ನವನಗರದಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ‌ಶಾಸಕ ಡಾ.ವೀರಣ್ಣ ಚರಂತಿಮಠ ರವಿವಾರ ದಿಢೀರ‌್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.

ಶಾಸಕ ಡಾ.ವೀರಣ್ಣ ಚರಂತಿಮಠ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಿಢೀರ ಭೇಟಿ ನೀಡಿದರು

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಔಷಧ ಕೊಠಡಿಗೆ ಭೇಟಿದರು. ಹೆರಿಗೆ ವಿಭಾಗದಲ್ಲಿ ದಾಖಲಾದ ಮಹಿಳೆಯರನ್ನು ಮಾತಾಡಿಸಿ ಆಸ್ಪತ್ರೆಯ ವ್ಯವಸ್ಥೆ ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು. ಗರ್ಭಿಣಿ ಮಹಿಳೆಯರಿಗೆ ಸೋಂಕು ತಗುಲದಂತೆ ನೋಡಿಕೊಳ್ಳಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ‌ ಮಕ್ಕಳ‌ ವಿಭಾಗಕ್ಕೆ‌ ಭೇಟಿ‌ ನೀಡಿ ಮಕ್ಕಳಿಗೆ ಆಟಿಕೆ‌ ಸಾಮಾಗ್ರಿಗಳನ್ನು ಒದಗಿಸಬೇಕು. ಆಕರ್ಷಿಸುವ ಆಟಿಗೆ ಸಾಮಾನು ಖರೀದಿ ಮಾಡಿ ಕೊಠಡಿಯಲ್ಲಿ ಇಡಬೇಕು. ಇವೆಲ್ಲ ಮನರಂಜನೆಗೆ ಅನುಕೂಲವಾಗಲಿದೆ ಎಂದರು.

ರೋಗಿಗಳಿಗೆ ಒಳ್ಳೆಯ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ಆಸ್ಪತ್ರೆಯ ಜಾಗದಲ್ಲಿ ಉದ್ಯಾನ ನಿರ್ಮಿಸಿಬೇಕು. ಆ ಕೆಲಸವನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕು ಎಂದು ಡಿಎಚ್ಒ ಅವರಿಗೆ ತಿಳಿಸಿದರು. ಐಸಿಯು ವಿಭಾಗದ ಶುಚಿತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಆಸ್ಪತ್ರೆಯ ಒಳಚರಂಡಿ ವ್ಯವಸ್ಥೆ ಹಾಗೂ ಕಟ್ಟಡ ನಿರ್ವಹಣೆ ಕಾಮಗಾರಿ ಕುರಿತು ಡಿಎಚ್ಒ ದೇಸಾಯಿ ಅವರು ಶಾಸಕರ‌ ಗಮನಕ್ಕೆ ತಂದರು. ಸ್ಥಳದಲ್ಲೇ ಇದ್ದ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಅವರಿಗೆ ತಕ್ಷಣವೇ ಒಳಚರಂಡಿ ಕಾಮಗಾರಿಗೆ ಸೂಚಿಸಿದರು.

Intro:AnchorBody:ಬಾಗಲಕೋಟೆ: ನವನಗರದಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ‌ಶಾಸಕರಾದ ಡಾ.ವೀರಣ್ಣ ಚರಂತಿಮಠ ರವಿವಾರ ದಿಢೀರ‌ ಭೇಟಿ ಅಲ್ಲಿಯ ವ್ಯವಸ್ಥೆ ಯನ್ನು ಪರಿಶೀಲಿಸಿದರು.
ಶಾಸಕರು ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಔಷಧ ಕೊಠಡಿಗೆ ಭೇಟಿ ನೀಡಿ‌ ಔಷಧ ಅವಧಿಯನ್ನು ಸಹ ಪರಿಶೀಲಿಸಿದರು.
ಹೆರಿಗೆ ವಿಭಾಗದ ಕೊಠಡಿಗೆ ಭೇಟಿ ನೀಡಿ ಅಲ್ಲಿದ್ದ ಮಹಿಳೆಯರನ್ನು ಮಾತಾಡಿಸುವ ಮೂಲಕ‌ ಆಸ್ಪತ್ರೆಲ್ಲಿ ಸಿಗುವ ವ್ಯವಸ್ಥೆ ,ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು.ಇದಲ್ಲದೇ ಗರ್ಭಿಣಿ ಮಹಿಳೆಯರಿಗೆ ಇನಪೆಕ್ಷನ್ ಆಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯರಿಗೆ ಸೂಚಿಸಿದರು.
ಮಕ್ಕಳ ವಿಭಾಗಕ್ಕೆ ಭೇಟಿ: ಸರ್ಕಾರಿ ಆಸ್ಪತ್ರೆಯಲ್ಲಿ‌ ಮಕ್ಕಳ‌ ವಿಭಾಗಕ್ಕೆ‌ ಭೇಟಿ‌ ನೀಡಿ ಮಕ್ಕಳಿಗೆ ಆಟಿಕೆ‌ ಸಾಮಾಗ್ರಿಗಳನ್ನು ಒದಗಿಸಬೇಕು.ಮಕ್ಕಳನ್ನು ಆಕರ್ಷಿಸುವ ಆಟಿಗೆ ಸಾಮಾನು ಖರೀದಿ ಮಾಡಿ ಕೊಠಡಿಯಲ್ಲಿ ಇಡಬೇಕು. ಮಕ್ಕಳ‌ ಮನರಂಜನೆಗೆ ಅನುಕೂಲವಾಗಲಿದೆ ಎಂದರು
ಸರ್ಕಾರಿ ಆಸ್ಪತ್ರೆಯಲ್ಲಿ‌ ಸುಂದರ‌ ಉದ್ಯಾನವನ್ನೊಂದನ್ನು ನಿರ್ಮಾಣ ಮಾಡಿ ಅದನ್ನು ಸರಿಯಾಗಿ ಮಾಡಿದರೆ‌ ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಳ್ಳೆಯ ವಾತಾವರಣ ಕಲ್ಪಿಸಿದಂತಾಗುತ್ತದೆ.ಆ ಕೆಲಸವನ್ನು ಶೀಘ್ರ ಮಾಡಬೇಕು ಎಂದು ಡಿಎಚ್ಓ ಅವರಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ಐಸಿಯು ವಿಭಾಗದ ಶುಚಿತ್ವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಆಸ್ಪತ್ರೆಯಲ್ಲಿ ಎಲ್ಲ‌ ವಿಭಾಗದ ಕಟ್ಟಡಗಳನ್ನು ಸುಂದರವಾಗಿ ಕಟ್ಟಲಾಗಿದೆ.ಆದರೆ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ‌ಡ್ರೈನೇಜ್ ವ್ಯವಸ್ಥೆ ಯೊಂದು ಸರಿ ಮಾಡಬೇಕಾಗಿದೆ ಎಂದು ಡಿಎಚ್ಓ ದೇಸಾಯಿಯವರು ಶಾಸಕರ‌ ಗಮನಕ್ಕೆ ತಂದಾಗ ಸ್ಥಳದಲ್ಲೇ ಇದ್ದ ನಗರಸಭೆ ಪೌರಾಯುಕ್ತ‌ ಗಣಪತಿ ಪಾಟೀಲ ಅವರಿಗೆ ತಕ್ಷಣವೇ ಡ್ರೈನೇಜ್ ಕೆಲಸ ಮಾಡಿಸಿ,ಇನ್ನೂ ಬಡ ಜನ ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಬರುತ್ತಾರೆ ಅವರಿಗೆ ಯಾವುದೇ ಅನಾನೂಕಲತೆ ಆಗಬಾರದು ಎಂದು ಅಧಿಕಾರಿಗಳಿಗೆ ,ವೈದ್ಯರಿಗೆ ಸೂಚಿಸಿದರು.Conclusion:Etv ,Bharat,
Bagalkote
ETV Bharat Logo

Copyright © 2025 Ushodaya Enterprises Pvt. Ltd., All Rights Reserved.