ಸೌತಂಪ್ಟನ್: ಒಂದು ವರ್ಷದ ಬಳಿಕ ಆಸ್ಟ್ರೇಲಿಯಾ ತಂಡದ ಪರ ಆಡುತ್ತಿರುವ ಸ್ಟಿವ್ ಸ್ಮಿತ್ ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಇಂಗ್ಲೆಂಡ್‌ನ ಸೌತಂಪ್ಟನ್ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 297 ರನ್ ಗಳಿಸಿತು.
ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ 43 ರನ್ ಗಳಿಸಿದರೆ, ಫಿಂಚ್ 14 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಶಾನ್ ಮಾರ್ಶ್ 30, ಖವಾಜ 31, ಸ್ಟೋಯ್ನಿಸ್ 13ಮ ಅಲೆಕ್ಸ್ ಕ್ಯಾರಿ 30 ರನ್ ಗಳಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ 102 ಎಸೆತಗಳಲ್ಲಿ 116 ರನ್ಗಳಿಸಿ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಅವರ ಇನಿಂಗ್ಸ್ನಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿಗಳಿದ್ದವು.
-
Steve Smith has gone past three figures!
— Cricket World Cup (@cricketworldcup) May 25, 2019 " class="align-text-top noRightClick twitterSection" data="
Two overs to go for Australia – they're currently 276/6.
FOLLOW #ENGvAUS LIVE: https://t.co/8HZm23Nx7a pic.twitter.com/VH7QMqi5xf
">Steve Smith has gone past three figures!
— Cricket World Cup (@cricketworldcup) May 25, 2019
Two overs to go for Australia – they're currently 276/6.
FOLLOW #ENGvAUS LIVE: https://t.co/8HZm23Nx7a pic.twitter.com/VH7QMqi5xfSteve Smith has gone past three figures!
— Cricket World Cup (@cricketworldcup) May 25, 2019
Two overs to go for Australia – they're currently 276/6.
FOLLOW #ENGvAUS LIVE: https://t.co/8HZm23Nx7a pic.twitter.com/VH7QMqi5xf
ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಲಿಯಾಮ್ ಫ್ಲಂಕೇಟ್ 4 ವಿಕೆಟ್, ಮಾರ್ಕ್ ವುಡ್ , ಟಾಮ್ ಕರ್ರನ್ ಹಾಗೂ ಲಿಯಾಮ್ ಡೇವ್ಸನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
298 ರನ್ ಬೆನ್ನೆಟ್ಟಿರುವ ಇಂಗ್ಲೆಂಡ್ 6.5 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 39 ರನ್ಗಳಿಸಿದೆ. ರಾಯ್ 24 ರನ್ ಹಾಗೂ ಖಾತೆ ತೆರೆಯದ ಜೇಮ್ಸ್ ವಿನ್ಸ್ ಕ್ರೀಸ್ನಲ್ಲಿದ್ದಾರೆ.