ETV Bharat / briefs

ಜವಾನ್​ v/s ಚೌಕಿದಾರ್ ​: ಪಿಎಂ ವಿರುದ್ಧ ಸೆಣೆಸಲು ಸೈಕಲ್‌ ಏರಿದ ಮಾಜಿ ಯೋಧ ತೇಜ್​ ಬಹದ್ದೂರ್​!

ಭಾರತೀಯ ಸೇನೆಯಲ್ಲಿ ಕಳಪೆ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು 2017ರಲ್ಲಿ ಗಂಭೀರ ಆರೋಪ ಮಾಡಿದ್ದ ತೇಜ್​ ಬಹದ್ದೂರ್​ ವಿರುದ್ಧ ತನಿಖೆ ಕೈಗೊಂಡು ತದನಂತರ ಅವರನ್ನ ಸೇವೆಯಿಂದ ವಜಾಗೊಳಿಸಲಾಗಿತ್ತು.

ಪ್ರಧಾನಿ ವಿರುದ್ಧ ಸ್ಪರ್ಧೆ
author img

By

Published : Apr 29, 2019, 4:47 PM IST

ಪಾಟ್ನಾ: ಬಿಎಸ್​ಎಫ್​ನ ಮಾಜಿ ಯೋಧ ತೇಜ್​ ಬಹದ್ದೂರ್​ ಯಾದವ್​ ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸೇನೆಯಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಅಂತಾ ವಿಡಿಯೋ ಮಾಡಿ ಫೇಸ್​ಬುಕ್​​ನಲ್ಲಿ ಹರಿಬಿಟ್ಟಿದ್ದ ಮಾಜಿ ಯೋಧ ಇದೀಗ ನಮೋ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.

ಈಗಾಗಲೇ ಈ ಕ್ಷೇತ್ರಕ್ಕಾಗಿ ಸಮಾಜವಾದಿ ಪಕ್ಷ ಶಾಲಿನಿ ಯಾದವ್​ ಹೆಸರು ಫೈನಲ್​ ಮಾಡಿತ್ತು. ಅವರು ನಾಮಪತ್ರ ಸಲ್ಲಿಕೆ ಕೂಡ ಮಾಡಿದ್ದರು. ಆದರೆ, ಇದೀಗ ತನ್ನ ಅಭ್ಯರ್ಥಿ ಬದಲಾವಣೆ ಮಾಡಿರುವ ಪಕ್ಷ, ಮಾಜಿ ಯೋಧನಿಗೆ ಟಿಕೆಟ್​ ನೀಡಿ, ಪ್ರಧಾನಿ ಮೋದಿ ಕಟ್ಟಿ ಹಾಕುವ ರಣತಂತ್ರಕ್ಕೆ ಮುಂದಾಗಿದೆ.

ಹರಿಯಾಣದ ನಿವಾಸಿ ತೇಜ್​ ಬಹದ್ದೂರ್​ ಯಾದವ್​, 2017ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯೋಧರಿಗೆ ನೀಡುವ ಕಳಪೆ ಆಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಅವರನ್ನ ಸೇನೆಯಿಂದ ವಜಾಗೊಳಿಸಲಾಗಿತ್ತು. ಅದಾದ ಬಳಿಕ ವಾರಣಾಸಿ ಕ್ಷೇತ್ರದಿಂದ ಸ್ಫರ್ಧೆ ಮಾಡುವ ಇಂಗಿತವನ್ನು ತೇಜ್‌ ಬಹುದ್ದೂರ್​ ವ್ಯಕ್ತಪಡಿಸಿದ್ದರು.

ಈಗಾಗಲೇ ಈ ಕ್ಷೇತ್ರದಿಂದ 2014ರಲ್ಲಿ ಗೆಲುವು ದಾಖಲು ಮಾಡಿದ್ದ ಪ್ರಧಾನಿ ಮೋದಿ, ಏಪ್ರಿಲ್​ 26ರಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೀಗ ತೇಜ್ ಬಹುದ್ದೂರ್​ ಯಾದವ್ ಇವರ ವಿರುದ್ಧ ಸ್ಪರ್ಧೆ ಮಾಡಿದ್ದಾರೆ.

Intro:Body:

ಜವಾನ್​ ವರ್ಸಸ್​ ಚೌಕಿದಾರ್​: ಪ್ರಧಾನಿ ವಿರುದ್ಧ ಮಾಜಿ ಯೋಧ ತೇಜ್​ ಬಹದ್ದೂರ್​ಗೆ ಟಿಕೆಟ್​! 

ಪಾಟ್ನಾ: ಬಿಎಸ್​ಎಫ್​ನ ಮಾಜಿ ಯೋಧ ತೇಜ್​ ಬಹದ್ದೂರ್​ ಯಾದವ್​ ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸೇನೆಯಲ್ಲಿ ಕಳಪೆ ಆಹಾರ ನೀಡುವುದರಿಂದ ಬೇಸತ್ತು ಫೇಸ್​ಬುಕ್​​ನಲ್ಲಿ ದೊಡ್ಡ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ ಯೋಧ ಇದೀಗ ನಮೋ ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದಾರೆ.

ಈಗಾಗಲೇ ಈ ಕ್ಷೇತ್ರಕ್ಕಾಗಿ ಸಮಾಜವಾದಿ ಪಕ್ಷ ಶಾಲಿನಿ ಯಾದವ್​ ಹೆಸರು ಫೈನಲ್​ ಮಾಡಿತ್ತು. ಅವರು ನಾಮಪತ್ರ ಸಲ್ಲಿಕೆ ಕೂಡ ಮಾಡಿದ್ದರು. ಆದರೆ ಇದೀಗ ತನ್ನ ಅಭ್ಯರ್ಥಿ ಬದಲಾವಣೆ ಮಾಡಿರುವ ಪಕ್ಷ, ಮಾಜಿ ಯೋಧನಿಗೆ ಟಿಕೆಟ್​ ನೀಡಿ, ಪ್ರಧಾನಿ ಮೋದಿ ಕಟ್ಟಿ ಹಾಕುವ ರಣತಂತ್ರಕ್ಕೆ ಮುಂದಾಗಿದೆ. 

ಹರಿಯಾಣದ ನಿವಾಸಿಯಾಗಿರುವ ತೇಜ್​ ಬಹದ್ದೂರ್​ ಯಾದವ್​, 2017ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯೋಧರಿಗೆ ನೀಡುವ ಕಳಪೆ ಆಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಅವರನ್ನ ಸೇನೆಯಿಂದ ವಜಾಗೊಳಿಸಲಾಗಿತ್ತು. ಅದಾದ ಬಳಿಕ ವಾರಣಾಸಿ ಕ್ಷೇತ್ರದಿಂದ ಸ್ಫರ್ಧೆ ಮಾಡುವ ಇಂಗಿತವನ್ನು ಬಹುದ್ದೂರ್​ ವ್ಯಕ್ತಪಡಿಸಿದ್ದರು. 

ಈಗಾಗಲೇ ಈ ಕ್ಷೇತ್ರದಿಂದ 2014ರಲ್ಲಿ ಗೆಲುವು ದಾಖಲು ಮಾಡಿದ್ದ ಪ್ರಧಾನಿ ಮೋದಿ ಏಪ್ರಿಲ್​ 26ರಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೀಗ ತೇಜ್ ಬಹುದ್ದೂರ್​ ಯಾದವ್ ಇವರ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.