ETV Bharat / briefs

ಶಿವಮೊಗ್ಗ ಕದನದಲ್ಲಿ ಮಾಜಿ ಸಿಎಂಗಳ ಪುತ್ರರು... ಬಿಜೆಪಿ ಭದ್ರಕೋಟೆಯಲ್ಲಿ ನಡೆಯುವುದೇ ದೋಸ್ತಿಗಳ ಆಟ? - ಶಿವಮೊಗ್ಗ

ಸಹ್ಯಾದ್ರಿ ಪರ್ವತ ಶ್ರೇಣಿಗಳ ಪ್ರಕೃತಿ ಸೌಂದರ್ಯವಿರುವ ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ರಾಜಕೀಯ ಹಿನ್ನೆಲೆ ಇದೆ. ಸಾಹಿತ್ಯಿಕವಾಗಿ ಮುಂದುವರೆದ ಜಿಲ್ಲೆ ಅನೇಕ ಹೆಸರಾಂತ ಸಾಹಿತಿಗಳನ್ನು ಕೊಡುಗೆಯಾಗಿ ಕೊಟ್ಟಿದೆ. ಈ ಬಾರಿ ಲೋಕಸಭೆ ಕ್ಷೇತ್ರದಿಂದ ಪರಸ್ಪರ ಮುಖಾಮುಖಿಯಾಗಿರುವವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು. ಪ್ರಾಕೃತಿಕ ಸಂಪತ್ತಿನ ಜೊತೆಗೆ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಶಿವಮೊಗ್ಗದ ರಾಜಕೀಯ ಒಳನೋಟಗಳನ್ನು ಕುರಿತ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

MP candidates
author img

By

Published : May 22, 2019, 4:23 PM IST

ಶಿವಮೊಗ್ಗ: ಜಿಲ್ಲೆ ರಾಜ್ಯಕ್ಕೆ ಅನೇಕ ಮಂತ್ರಿ ಮಹೋದಯರನ್ನು ಕೊಟ್ಟಿದ್ದು, ಇಬ್ಬರು ಸಿಎಂಗಳು ಇದೇ ಪ್ರದೇಶದಿಂದ ಬಂದು ರಾಜ್ಯವಾಳಿದ್ದಾರೆ. ಕಾಕತಾಳೀಯ ಎಂಬಂತೆ ಈ ಬಾರಿಯ ಚುನಾವಣೆಯಲ್ಲಿ ಅದೇ ಇಬ್ಬರು ಸಿಎಂಗಳ ಮಕ್ಕಳು ಪರಸ್ಪರ ಎದುರುಬದುರಾಗಿ ಫೈಟ್ ಮಾಡುತ್ತಿದ್ದಾರೆ.

ಶಿವಮೊಗ್ಗ ಜಿದ್ದಾಜಿದ್ದಿನ ಕಣವಾಗಲು ಕಾರಣವೇನು?

ಮಲೆನಾಡಿನಲ್ಲಿ ಅದ್ರಲ್ಲೂ ಶಿವಮೊಗ್ಗ ಇತ್ತೀಚೆಗಿನ ವರ್ಷಗಳಲ್ಲಿ ಬಿಜೆಪಿಯ ಭದ್ರಕೋಟೆ. ಈ ಕೋಟೆಯೊಳಗೆ ನುಗ್ಗಿ ಅಧಿಪತ್ಯ ಸಾಧಿಸಲು ಈ ಬಾರಿ ಎಂದಿನಂತೆ ಜೆಡಿಎಸ್ ತನ್ನ ಅಭ್ಯರ್ಥಿ ಮಧು ಬಂಗಾರಪ್ಪರನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಯಡಿಯೂರಪ್ಪರ ರಾಜೀನಾಮೆಯಿಂದ ತೆರವಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಾಲಿ ಸಂಸದ ಬಿಎಸ್‌ವೈ ಪುತ್ರ ಮರುಆಯ್ಕೆ ಬಯಸಿ ಚುನಾವಣಾ ರಣರಂಗದಲ್ಲಿದ್ದಾರೆ. ಕಳೆದ ಏಳು ದಶಕಗಳಿಗೆ ಹೋಲಿಸಿದರೆ, ಈ ಬಾರಿ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ 76 ಮತದಾನವಾಗಿದೆ. ಸಾಮಾನ್ಯವಾಗಿ ಹಿಂದೆಲ್ಲಾ ಕ್ಷೇತ್ರದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಅನ್ನೋ ಲೆಕ್ಕಾಚಾರವಿತ್ತು. ಆದ್ರೆ ಈ ಬಾರಿ ಬಿಜೆಪಿ ಏಕಾಂಗಿಯಾಗಿದ್ದು,ದೋಸ್ತಿ ಪಕ್ಷಗಳು ಜತೆ ಸೇರಿ ಚುನಾವಣಾ ರಣಾಂಗಣದಲ್ಲಿ ಹೋರಾಡುತ್ತಿವೆ.

ಶಿವಮೊಗ್ಗ ಚುನಾವಣಾ ಕದನ

ಜಿಲ್ಲೆಯ ಜಾತಿ ಸಮೀಕರಣ ಏನು ಹೇಳುತ್ತೆ?

ಜಿಲ್ಲೆಯ ಜಾತಿವಾರು ಮತದಾರರ ವಿವರ
ಈಡಿಗರು - 3.25 ಲಕ್ಷ
ಮುಸ್ಲಿಮರು - 2.60 ಲಕ್ಷ.
ಲಿಂಗಾಯತರು -2.85 ಲಕ್ಷ
ಒಕ್ಕಲಿಗರು -1.22 ಲಕ್ಷ
ದಲಿತರು -2.45 ಲಕ್ಷ
ಮರಾಠಿಗರು -50 ಸಾವಿರ
ಜೈನರು -20 ಸಾವಿರ
ತಮಿಳರು -40 ಸಾವಿರ
ಕ್ರೈಸ್ತರು -60 ಸಾವಿರ
ಕುರುಬರು -80 ಸಾವಿರ

ಜಿಲ್ಲೆಯಲ್ಲಿರುವ ಜಾತಿ ಸಮೀಕರಣವನ್ನು ನೋಡೋದಾದ್ರೆ, ಈಡಿಗ ಸಮುದಾಯದ ಸಂಖ್ಯೆ ಪ್ರಬಲವಾಗಿದ್ದು, 3.24 ಲಕ್ಷ ಮತದಾರರಿದ್ದಾರೆ. ಇನ್ನುಳಿದಂತೆ ಮುಸ್ಲಿಮರು 2.60 ಲಕ್ಷ, ಲಿಂಗಾಯುತರು 2.85 ಲಕ್ಷ, ಒಕ್ಕಲಿಗರು1.22 ಲಕ್ಷ, ದಲಿತರು 2.45 ಲಕ್ಷ, ಮರಾಠಿಗರು 50 ಸಾವಿರ,ಜೈನರು 20 ಸಾವಿರ,ತಮಿಳರು 40 ಸಾವಿರ, ಕ್ರೈಸ್ತರು 60 ಸಾವಿರ ಹಾಗು ಕುರುಬ ಸಮುದಾಯದ 80 ಸಾವಿರ ಮಂದಿ ಮತದಾರರಿದ್ದಾರೆ.

MP candidates
ಮಧು ಬಂಗಾರಪ್ಪ ಮತ್ತ ಬಿ ವೈ ರಾಘವೇಂದ್ರ

ನೂತನ ಸಂಸದರಿಗೆ ಸಮಸ್ಯೆಗಳ ಸವಾಲು!

ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಮುಖವಾಗಿ ಬಗರ್‌ಹುಕುಂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಮಸ್ಯೆಗೆ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ. ಇನ್ನೊಂದೆಡೆ ಎಂಪಿಎಂ ಹಾಗೂ ಐಎಸ್ಎಲ್ ಕಾರ್ಖಾನೆಗಳ ಸಮಸ್ಯೆ. ಈ ಎರಡೂ ಕಾರ್ಖಾನೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿ ದುಡಿಯುವ ಸಾವಿರಾರು ಕಾರ್ಮಿಕರಿಗೆ ಕೆಲಸ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಸಂಸದರು ಗಮನಹರಿಸಬೇಕು ಅನ್ನೋದು ಜನತೆಯ ನಿರೀಕ್ಷೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.