ಬೆಂಗಳೂರು: ಲಾಕ್‌ಡೌನ್ ಪರಿಸ್ಥಿತಿ ಮತ್ತು ಕೋವಿಡ್-19 ಪ್ರಕರಣಗಳ ಉಲ್ಬಣವನ್ನು ಪರಿಗಣಿಸಿ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳು ನಗರದಾದ್ಯಂತ ವಿವಿಧ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ (ಆರ್‌ಡಬ್ಲ್ಯುಎ) ಮತ್ತು ಕಾರ್ಪೊರೇಟ್‌ಗಳಲ್ಲಿ ಲಸಿಕೆ ಶಿಬಿರಗಳನ್ನು ಹೊರತರಲು ಮುಂದಾಗಿವೆ.
ಈ ಸಮುದಾಯ ಪ್ರಯೋಜನ ಶಿಬಿರದ ಏಕೈಕ ಉದ್ದೇಶವೆಂದರೆ ಲಸಿಕೆಗಳಿಗಾಗಿ ದೀರ್ಘಕಾಲ ಕಾಯುವ ಸಮಯವನ್ನು ಕಡಿತಗೊಳಿಸುವುದಾಗಿದೆ. ಅನೇಕ ನಾಗರಿಕರಿಗೆ ಲಸಿಕೆ ನೀಡುತ್ತಾ, ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಮುಂದುವರಿಸುತ್ತಿದೆ. ಆರ್‌ಡಬ್ಲ್ಯುಎ ಮತ್ತು ಕಾರ್ಪೊರೇಟ್ ವ್ಯಾಕ್ಸಿನೇಷನ್ ಶಿಬಿರಗಳನ್ನು ವೈದ್ಯರು, ನರ್ಸ್ಗಳು, ದಾಖಲೆ ಪರಿಶೀಲಕರು, ಬಿಲ್ಲಿಂಗ್ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಮತ್ತು ಸುಸಜ್ಜಿತ ಆಂಬ್ಯುಲೆನ್ಸ್ ಒಳಗೊಂಡ ತಂಡವು ಮುನ್ನಡೆಸಲಿದೆ.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ವಲಯ ನಿರ್ದೇಶಕ ಡಾ. ಮನೀಶ್ ಮ್ಯಾಥೂ ಮಾತಾನಾಡಿ, ರೋಗಿಗಳ ಸುರಕ್ಷತೆಯು ನಮ್ಮ ಮೊದಲ ಆದ್ಯತೆಯಾಗಿದೆ. ಈ ಅಭಿಯಾನದ ಮೂಲಕ ಜನರ ಮನೆಬಾಗಿಲಿಗೆ ಚುಚ್ಚುಮದ್ದು ತಲುಪಿಸುವ ಗುರಿ ಹೊಂದಿದ್ದೇವೆ. ಆರಂಭದಲ್ಲಿ, ನಮ್ಮ ನೆರೆಹೊರೆಯಲ್ಲಿ ಮಾತ್ರ ವ್ಯಾಕ್ಸಿನೇಷನ್ ಶಿಬಿರವನ್ನು ನಡೆಸಲು ನಾವು ಯೋಜಿಸಿದ್ದೆವು. ಆದಾಗ್ಯೂ, ನಗರದಾದ್ಯಂತದ ಆರ್‌ಡಬ್ಲ್ಯೂಎ ಮತ್ತು ಕಾರ್ಪೊರೇಟ್‌ಗಳಿಂದ ನಾವು ವಿನಂತಿಗಳನ್ನು ಸ್ವೀಕರಿಸಿದ್ದೇವೆ. ಆದ್ದರಿಂದ, ನಾವು ಇಂದಿನಿಂದ 30 ಕಾರ್ಪೊರೇಟ್‌ಗಳು ಮತ್ತು 31 ಆರ್‌ಡಬ್ಲ್ಯೂಎಗಳಲ್ಲಿ ಶಿಬಿರಗಳನ್ನು ಹೊರ ತರುತ್ತಿದ್ದೇವೆ ಎಂದರು.
ಹೆಚ್ಚುವರಿಯಾಗಿ, ನಾವು ಆರ್‌ಡಬ್ಲ್ಯೂಎ ಮತ್ತು ಕಾರ್ಪೊರೇಟ್‌ಗಳ ಲಸಿಕೆ ಅಗತ್ಯವನ್ನು ಒಟ್ಟುಗೂಡಿಸುತ್ತಿದ್ದೇವೆ. ಇದನ್ನು ಜೂನ್‌ನಲ್ಲಿ 2ನೇ ಹಂತದಲ್ಲಿ ಮಾಡಲಾಗುತ್ತದೆ. ನಮ್ಮ ಮನೆಯೊಳಗಿನ ವ್ಯಾಕ್ಸಿನೇಷನ್ ಡ್ರೈವ್‌ನಂತೆಯೇ, ನಮ್ಮ ತಂಡಗಳು ಸಮುದಾಯ ಶಿಬಿರಗಳಲ್ಲಿನ ಎಲ್ಲಾCOVID-19 ಸುರಕ್ಷತಾ ಪ್ರೊಟೋಕಾಲ್‌ಗಳನ್ನುಅನುಸರಿಸುತ್ತವೆ ಎಂದು ಹೇಳಿದರು.