ಬೆಂಗಳೂರು: ಜೂ.14ರ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಕೊಡದೇ ಇರೋದು ಸರ್ಕಾರದ ದಮನಕಾರಿ ನೀತಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![Siddaramayya](https://etvbharatimages.akamaized.net/etvbharat/prod-images/10:02_kn-bng-02-siddu-akrosha-script-7208077_10062020093314_1006f_1591761794_679.png)
ನಗರದ ತಮ್ಮ ಸರ್ಕಾರಿ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೇಲೆ ಬಿಜೆಪಿ ಗದಾ ಪ್ರಹಾರ ಮಾಡಲು ಹೊರಟಿದೆ. ಕಾರ್ಯಕ್ರಮದಲ್ಲಿ ನೂರೈವತ್ತು ಅಲ್ಲ ಅರವತ್ತು ಜನರೂ ಸೇರುತ್ತಿರಲಿಲ್ಲ. ಕಾನೂನು ಪ್ರಕಾರ ನಾವು ಏನು ಕಾರ್ಯಕ್ರಮ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಗುಡುಗಿದರು.
ಬಿಹಾರ, ಯುಪಿಯಲ್ಲಿ ಅನುಮತಿ ಕೊಟ್ಟಿದ್ಯಾಕೆ ಹಾಗಾದ್ರೆ? ಅಮಿತ್ ಶಾ ವರ್ಚುವಲ್ ರ್ಯಾಲಿಗೆ ಯಾಕೆ ಅನುಮತಿ ಕೊಟ್ರಿ? ಅವರಿಗೊಂದು ನೀತಿ, ನಮಗೊಂದು ನೀತಿನಾ? ಬಿಜೆಪಿ ಮಾಡುತ್ತಿರುವುದು ಷಡ್ಯಂತ್ರ ಎಂದು ಆರೋಪಿಸಿದರು.
ಮಂಗಳೂರಿನತ್ತ ಡಿಕೆಶಿ ಪ್ರಯಾಣ:
ಇನ್ನೊಂದೆಡೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳೂರಿಗೆ ತೆರಳಿದ್ದಾರೆ.
ಹಿರಿಯ ಕೈ ನಾಯಕ ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ಭೇಟಿಗೆ ತೆರಳಿದ ಡಿ.ಕೆ. ಶಿವಕುಮಾರ್ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಕಾರ್ಯಕ್ರಮ ಮುಂದೂಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲಿದ್ದಾರೆ.