ನಾಟಿಂಗ್ಹ್ಯಾಮ್: ವಿಶ್ವಕಪ್ನಲ್ಲಿ ಉತ್ತಮ ಅಭಿಯಾನ ಆರಂಭಿಸಿರುವ ಟೀಂ ಇಂಡಿಯಾಗೆ ಬಹುದೊಡ್ಡ ಹೊಡೆತ ಬಿದ್ದಿದ್ದು, ಹೆಬ್ಬೆರಳ ಗಾಯಕ್ಕೊಳಗಾಗಿರುವ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ತಂಡದಿಂದ ಹೊರಗುಳಿದಿದ್ದಾರೆ. ಈ ವಿಚಾರವಾಗಿ ಕಿವೀಸ್ ಆಟಗಾರ ರಾಸ್ ಟೇಲರ್ ಮಾತನಾಡಿದ್ದಾರೆ.
ಶಿಖರ್ ಧವನ್ ಗಾಯಗೊಂಡಿರುವುದ ಟೀಂ ಇಂಡಿಯಾಗೆ ತುಂಬಲಾರದ ನಷ್ಟ ಎಂದು ರಾಸ್ ಟೇಲರ್ ಹೇಳಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಧವನ್ ಅದ್ಭುತ ರೆಕಾರ್ಡ್ ಹೊಂದಿದ್ದು, ಇದೀಗ ಅವರು ತಂಡದಲ್ಲಿ ಇಲ್ಲದಿರುವುದು ನಿಜಕ್ಕೂ ತಂಡಕ್ಕೆ ದೊಡ್ಡ ಹೊಡೆತ ಎಂದಿದ್ದಾರೆ. ರೋಹಿತ್-ಶಿಖರ್ ಜೋಡಿ ನಿಜಕ್ಕೂ ಅದ್ಭುತವಾಗಿದ್ದು, ಇದೀಗ ಅದನ್ನು ಟೀಂ ಇಂಡಿಯಾ ಹೇಗೆ ತುಂಬಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 117ರನ್ ಸಿಡಿಸಿದ ಧವನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೆಬ್ಬೆರಳಿನ ಗಾಯಕ್ಕೊಳಗಾಗಿರುವ ಅವರು ಮುಂದಿನ ಮೂರು ವಾರಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.