ಕೋಲಾರ: ಜಿಲ್ಲೆಯ ಮುಳಬಾಗಿಲಿನ ಅಲ್ಲಾಳಸಂದ್ರ ಗೇಟ್ ಬಳಿ ಜೂನ್ 5ರಂದು ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಇದು ನಾರಾಯಣರೆಡ್ಡಿ ಮೃತದೇಹ ಎಂಬುದು ಗೊತ್ತಾಗಿತ್ತಲ್ಲದೇ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ಕೊಲೆಗೆ ಸಂಬಂಧಿಸಿದಂತೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಚುರುಕುಗೊಳಿಸಿದ ಪೊಲೀಸ್ರು ಪತ್ನಿ ಭಾಗ್ಯಲಕ್ಷ್ಮಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಕೆಯ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ನಾಗರಾಜನನ್ನೂ ತನಿಖೆಗೆ ಒಳಪಡಿಸಿದ್ದರು.
ಪ್ರಿಯಕರ ನಾಗರಾಜ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ನಾರಾಯಣನ ಜತೆ ಸ್ನೇಹ ಬೆಳೆಸಿ, ಆತನೊಟ್ಟಿಗೆ ತಾನೂ ಕುಡಿದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ನಂತರ ಸುಳಿವು ಸಿಗದಂತೆ ನಾರಾಯಣರೆಡ್ಡಿ ಬೈಕ್ನಲ್ಲಿನ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾನೆ.
ನಾರಾಯಣರೆಡ್ಡಿ ಹಾಗೂ ಭಾಗ್ಯಲಕ್ಷ್ಮಿ ಮದುವೆ ಆಗಿ 10 ವರ್ಷಗಳಾಗಿದ್ದು, 10 ವರ್ಷದ ಗಂಡು ಮಗು ಸಹ ಇತ್ತು ಎಂದು ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿಯ ಗುರುತು ಹಾಗೂ ಕೊಲೆ ಆರೋಪಿಗಳಿಗೆ ಬಲೆ ಬೀಸಲಾಗಿತ್ತು. ಇನ್ಸ್ಪೆಕ್ಟರ್ ರಾಘವೇಂದ್ರ ಪ್ರಕಾಶ, ಪಿಎಸ್ಐ ಶ್ರೀಧರ ಹಾಗೂ ಡಿಎಸ್ಪಿ ಉಮೇಶ ಅವರ ಮಾರ್ಗ ದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸಂಬಂಧಿಕರನ್ನು ವಿಚಾರಿಸಿದಾಗ ಭಾಗ್ಯಲಕ್ಷ್ಮಿಯ ಅಕ್ರಮ ಸಂಬಂಧದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ತಿಳಿಸಿದರು.
ನಡಂಪಲ್ಲಿ ಪಕ್ಕದ ಗ್ರಾಮದ ಯಲುವಳ್ಳಿಯ ನಾಗರಾಜ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಭಾಗ್ಯಲಕ್ಷ್ಮಿ ಈ ಹಿಂದೆ ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದಳು. ಹಿರಿಯರೆಲ್ಲ ಸೇರಿ ಬುದ್ಧಿ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. ತನ್ನ ಹಳೆ ಚಾಳಿ ಬಿಡದ ಭಾಗ್ಯಲಕ್ಷ್ಮೀ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಅತ್ತೆ, ಮಾವನನ್ನ ಮನೆಯಿಂದ ಹೊರ ಹಾಕಿದ್ದಳು. ನಂತರ ಒಂದು ತಿಂಗಳಿನಿಂದ ಪ್ರಿಯಕರ ನಾಗರಾಜ್ ಜೊತೆಗೆ ಸೇರಿ ಗಂಡನನ್ನು ಮುಗಿಸುವ ತೀರ್ಮಾನ ಕೈಗೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.