ETV Bharat / briefs

ಉತ್ತರದಲ್ಲಿ ಬಿಸಿಗಾಳಿಯ ಎಚ್ಚರಿಕೆ... ಮಾನ್ಸೂನ್​​ಗೆ ದಕ್ಷಿಣದ ಜನತೆಯ ಕಾತರ..! - ಉತ್ತರ ಭಾರತ

ರಾಜಸ್ಥಾನದ ಚುರುವಿನಲ್ಲಿ ಶನಿವಾರ ದೇಶದಲ್ಲೇ ಅತ್ಯಂತ ಗರಿಷ್ಠ ತಾಪಮಾನ ದಾಖಲಾಗಿದೆ. ಚುರುವಿನಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಭಾರತದಲ್ಲಿಯೇ ಅತ್ಯಂತ ಹೆಚ್ಚಿನ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಸಿಗಾಳಿ
author img

By

Published : Jun 2, 2019, 11:57 AM IST

ನವದೆಹಲಿ: ದೇಶದ ವಿವಿಧೆಡೆ ತಾಪಮಾನ ತೀವ್ರವಾಗಿ ಏರಿಕೆಯಾಗಿದ್ದು ಮುಂಗಾರಿನ ಆಗಮನಕ್ಕೆ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಉತ್ತರ ಭಾರತದಲ್ಲಿ ಬಿಸಿ ಗಾಳಿ ಮುಂದಿನ 48 ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರ, ಪಂಜಾಬ್​​, ಹರಿಯಾಣ, ಚಂಡೀಗಢ ಹಾಗೂ ದೆಹಲಿಯಲ್ಲಿ ಭಾನುವಾರ ಹಾಗೂ ಸೋಮವಾರ ಬಿಸಿಲು ಹಾಗೂ ಬಿಸಿಗಾಳಿಯ ಪ್ರಮಾಣ ತೀವ್ರವಾಗಿ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಮುಂಗಾರು ಮಳೆ ಕೊಂಚ ಮುಂದಕ್ಕೆ, ಜೂ 6ಕ್ಕೆ ಸಾಧ್ಯತೆ: ಹವಾಮಾನ ಇಲಾಖೆ

ಚುರುವಿನಲ್ಲಿ ಗರಿಷ್ಠ ತಾಪಮಾನ..!

ರಾಜಸ್ಥಾನದ ಚುರುವಿನಲ್ಲಿ ಶನಿವಾರ ದೇಶದಲ್ಲೇ ಅತ್ಯಂತ ಗರಿಷ್ಠ ತಾಪಮಾನ ದಾಖಲಾಗಿದೆ. 50.8 ಡಿಗ್ರಿ ಸೆಲ್ಸಿಯಸ್ ಭಾರತದಲ್ಲಿ ಅತ್ಯಂತ ಹೆಚ್ಚಿನ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಸ್ಥಾನದ ಇತರ ಪ್ರದೇಶಗಳಾದ ಗಂಗಾನಗರ್​​(49 ಡಿಗ್ರಿ), ಬಿಕನೇರ್​(47.9 ಡಿಗ್ರಿ), ಜೈಸಲ್ಮೇರ್​( 47.2 ಡಿಗ್ರಿ) ಹಾಗೂ ಕೋಟಾ(46 ಡಿಗ್ರಿ) ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಬಾರಿಯ ಬೇಸಿಗೆಯಲ್ಲಿ ಕರ್ನಾಟಕದಲ್ಲೂ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಹಲವೆಡೆ ನೀರಿನ ಅಭಾವ ಉಂಟಾಗಿದೆ. ಜೂನ್​ 6ರಂದು ಕೇರಳ ಮೂಲಕ ಕರ್ನಾಟಕಕ್ಕೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಯು ಅಧಿಕೃತ ಮಾಹಿತಿ ನೀಡಿದೆ.

Intro:Body:

ಉತ್ತರದಲ್ಲಿ ಬಿಸಿಗಾಳಿಯ ಎಚ್ಚರಿಕೆ... ಮಾನ್ಸೂನ್​​ಗೆ ದಕ್ಷಿಣದ ಜನತೆಯ ಕಾತರ..!

ನವದೆಹಲಿ: ದೇಶದ ವಿವಿಧೆಡೆ ತಾಪಮಾನ ತೀವ್ರವಾಗಿ ಏರಿಕೆಯಾಗಿದ್ದು ಮುಂಗಾರಿನ ಆಗಮನಕ್ಕೆ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಉತ್ತರ ಭಾರತದಲ್ಲಿ ಬಿಸಿ ಗಾಳಿ ಮುಂದಿನ 48 ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರ, ಪಂಜಾಬ್​​, ಹರಿಯಾಣ, ಚಂಡೀಗಢ ಹಾಗೂ ದೆಹಲಿಯಲ್ಲಿ ಭಾನುವಾರ ಹಾಗೂ ಸೋಮವಾರ ಬಿಸಿಲು ಹಾಗೂ ಬಿಸಿಗಾಳಿಯ ಪ್ರಮಾಣ ತೀವ್ರವಾಗಿ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಚುರುವಿನಲ್ಲಿ ಗರಿಷ್ಠ ತಾಪಮಾನ..!

ರಾಜಸ್ಥಾನದ ಚುರುವಿನಲ್ಲಿ ಶನಿವಾರ ದೇಶದಲ್ಲೇ ಅತ್ಯಂತ ಗರಿಷ್ಠ ತಾಪಮಾನ ದಾಖಲಾಗಿದೆ. 50.8 ಡಿಗ್ರೀ ಸೆಲ್ಸಿಯಸ್ ಭಾರತದಲ್ಲಿ ಅತ್ಯಂತ ಹೆಚ್ಚಿನ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಸ್ಥಾನದ ಇತರ ಪ್ರದೇಶಗಳಾದ ಗಂಗಾನಗರ್​​(49 ಡಿಗ್ರೀ), ಬಿಕನೇರ್​(47.9 ಡಿಗ್ರೀ), ಜೈಸಲ್ಮೇರ್​( 47.2 ಡಿಗ್ರೀ) ಹಾಗೂ ಕೋಟಾ(46 ಡಿಗ್ರೀ) ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಬಾರಿಯ ಬೇಸಿಗೆಯಲ್ಲಿ ಕರ್ನಾಟಕದಲ್ಲೂ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಹಲವೆಡೆ ನೀರಿನ ಅಭಾವ ಉಂಟಾಗಿದೆ. ಜೂನ್​ ಆರರಂದು ಕೇರಳ ಮೂಲಕ ಕರ್ನಾಟಕಕ್ಕೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕೃತ ಮಾಹಿತಿ ನೀಡಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.