ETV Bharat / briefs

ಸಾಧಕರ ಸೀಟಿನಲ್ಲಿ ಸತೀಶ್ ಜಾರಕಿಹೊಳಿ... ವಾರಾಂತ್ಯದಲ್ಲಿ ಸಿಗ್ತಾರಾ ಬೆಳಗಾವಿ ಸಾಹುಕಾರ್​..? - memes

ಇದೀಗ ಅಭಿಮಾನಿಯೊಬ್ಬ ವೀಕೆಂಡ್ ವಿತ್​​​​ ರಮೇಶ್ ಕಾರ್ಯಕ್ರಮಕ್ಕೆ ಮುಂದಿನ ಅತಿಥಿಯಾಗಿ ಸತೀಶ್ ಜಾರಕಿಹೊಳಿ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ.

ಸತೀಶ್ ಜಾರಕಿಹೊಳಿ
author img

By

Published : Apr 30, 2019, 8:32 AM IST

Updated : Apr 30, 2019, 9:42 AM IST

ಚಿಕ್ಕೋಡಿ: ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಬಳಿಕ 'ನಮ್ಮ ಸಿಎಂ ಸತೀಶ ಜಾರಕಿಹೊಳಿ' ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ ಮೇಲೆ ರಿಕ್ಷಾ, ದ್ವಿಚಕ್ರವಾಹನಗಳ ಮೇಲೆಯೂ ಕಾಣಿಸಿಕೊಂಡು ರಾಜ್ಯಾದ್ಯಂತ ಸುದ್ದಿಯಾಗಿತ್ತು.

Sathish Jarakiholi
ಎಡಿಟ್ ಮಾಡಲಾದ ಫೋಟೋ

ಇದೀಗ ಅಭಿಮಾನಿಯೊಬ್ಬ ವೀಕೆಂಡ್ ವಿತ್​​​ ರಮೇಶ್ ಕಾರ್ಯಕ್ರಮಕ್ಕೆ ಮುಂದಿನ ಅತಿಥಿಯಾಗಿ ಸತೀಶ್ ಜಾರಕಿಹೊಳಿ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ.

Sathish Jarakiholi
ಎಡಿಟ್ ಮಾಡಲಾದ ಫೋಟೋ

ಸಚಿವ ಸತೀಶ್ ಜಾರಕಿಹೊಳಿ ಹಾಟ್ ಸೀಟ್ ಮೇಲೆ ಕುಳಿತ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಫೋಟೋ ನೋಡಿದ್ರೆ, ಪ್ರತಿ ವಾರ ಸಾಧಕರನ್ನ ತಂದು ಕೂರಿಸಿ, ಅವರ ಜೀವನ ಗಾಥೆಯ ಪರಿಚಯ ಮಾಡಿಸಿಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನೆಕ್ಸ್ಟ್ ಬರೋದು ಸತೀಶ್ ಜಾರಕಿಹೊಳಿ ಎನ್ನುವಂತೆ ಅಭಿಮಾನಿ ಎಡಿಟ್ ಮಾಡಿದ್ದಾನೆ.

ಚಿಕ್ಕೋಡಿ: ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಬಳಿಕ 'ನಮ್ಮ ಸಿಎಂ ಸತೀಶ ಜಾರಕಿಹೊಳಿ' ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ ಮೇಲೆ ರಿಕ್ಷಾ, ದ್ವಿಚಕ್ರವಾಹನಗಳ ಮೇಲೆಯೂ ಕಾಣಿಸಿಕೊಂಡು ರಾಜ್ಯಾದ್ಯಂತ ಸುದ್ದಿಯಾಗಿತ್ತು.

Sathish Jarakiholi
ಎಡಿಟ್ ಮಾಡಲಾದ ಫೋಟೋ

ಇದೀಗ ಅಭಿಮಾನಿಯೊಬ್ಬ ವೀಕೆಂಡ್ ವಿತ್​​​ ರಮೇಶ್ ಕಾರ್ಯಕ್ರಮಕ್ಕೆ ಮುಂದಿನ ಅತಿಥಿಯಾಗಿ ಸತೀಶ್ ಜಾರಕಿಹೊಳಿ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ.

Sathish Jarakiholi
ಎಡಿಟ್ ಮಾಡಲಾದ ಫೋಟೋ

ಸಚಿವ ಸತೀಶ್ ಜಾರಕಿಹೊಳಿ ಹಾಟ್ ಸೀಟ್ ಮೇಲೆ ಕುಳಿತ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಫೋಟೋ ನೋಡಿದ್ರೆ, ಪ್ರತಿ ವಾರ ಸಾಧಕರನ್ನ ತಂದು ಕೂರಿಸಿ, ಅವರ ಜೀವನ ಗಾಥೆಯ ಪರಿಚಯ ಮಾಡಿಸಿಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನೆಕ್ಸ್ಟ್ ಬರೋದು ಸತೀಶ್ ಜಾರಕಿಹೊಳಿ ಎನ್ನುವಂತೆ ಅಭಿಮಾನಿ ಎಡಿಟ್ ಮಾಡಿದ್ದಾನೆ.

Intro:ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಎಂಬ ಪೊಸ್ಟ ಈಗ ಪುಲ್ ವೈರಲ್
Body:
ಚಿಕ್ಕೋಡಿ :
ೋರಿ

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಬಳಿಕ "ನಮ್ಮ ಸಿಎಂ ಸತೀಶ ಜಾರಕಿಹೊಳಿ" ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ ಮೇಲೆ ರಿಕ್ಷಾ, ದ್ವಿಚಕ್ರವಾಹನಗಳ ಮೇಲೆಯೂ ಕಾಣಿಸಿಕೊಂಡು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಇನ್ನೂ ಯಾರೂ ಮರೆತಿಲ್ಲ. ಈಗ ಮತ್ತೊಬ್ಬ ಅಭಿಮಾನಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನೆಕ್ಸ್ಟ್ ಬರೋದು ಸತೀಶ್ ಜಾರಕಿಹೊಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ ಈಗ ವೈರಲ್ ಆಗುತ್ತಿದೆ.

ಸಚಿವ ಸತೀಶ್ ಜಾರಕಿಹೊಳಿ ಹಾಟ್ ಸೀಟ್ ಮೇಲೆ ಕುಳಿತ ಫೋಟೋ, ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದ್ರೆ, ಪ್ರತಿವಾರ ಸಾಧಕರನ್ನ ತಂದು ಕೂರಿಸಿ, ಅವರ ಜೀವನ ಗಾಥೆಯ ಪರಿಚಯ ಮಾಡಿಸಿಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನೆಕ್ಸ್ಟ್ ಬರೋದು ಸತೀಶ್ ಜಾರಕಿಹೊಳಿ ಎಂದು ಸತೀಶ್ ಜಾರಕಿಹೊಳಿ ಅಭಿಮಾನಿಯೋರ್ವ, ಸತೀಶ್ ಜಾರಕಿಹೊಳಿ ಸಾಧಕರ ಸೀಟ್‌ ಮೇಲೆ ಕುಳಿತಿದ್ದು, ಇವರನ್ನು ರಮೇಶ್ ಅರವಿಂದ್ ಸ್ವಾಗತಿಸೋ ಥರ ಎಡಿಟ್ ಮಾಡಿದ್ದಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಸಖತ್ ವೈರಲ್ ಆಗಿದೆ.

ವಿಕೆಂಡ್ ವಿತ್ ರಮೇಶ್ ಸಾಧಕರ ಸೇವೆಯನ್ನು ಗುರುತಿಸುವ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ದಿವಂಗತ ಸಾಹುಕಾರ್ ಲಕ್ಷ್ಮಣ್ ರಾವ್ ಜಾರಕಿಹೂಳಿ ಅವರ ಕುಟುಂಬದ ಸದಸ್ಯರಾದ ಸತೀಶ್ ಜಾರಕಿಹೂಳಿ ಅವರಿಗೆ ಸಾಧಕರ ಕುರ್ಚಿಯಲ್ಲಿ ಏಕೆ ಆಹ್ವಾನಿಸಬೇಕಾಗಿ ಅವರ ಅಭಿಮಾನಿಗಳಾದ ನಮ್ಮ ಮನವಿ‌ ಎಂದು ಅಭಿಪ್ರಾಯದ ಹಂಚ್ಚಿಕೊಂಡಿದ್ದಾನೆ.

ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಎಂದರೆ ಕರ್ನಾಟಕದಲ್ಲಿ ನಂ.1 ಈ ತಾಲೂಕು ಚಳುವಳಿಯಲ್ಲಿ ಪ್ರಸಿದ್ಧವಾಗಿದೆ. ದಿವಂಗತ ಡಾಕ್ಟರ್ ರಾಜ್ ಕುಮಾರ್ ರವರು ಗೋಕಾಕ್ ಚಳುವಳಿಯ ಹೋರಾಟದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸಾಹುಕಾರ ದಿವಂಗತ ಲಕ್ಷ್ಮಣ್ ರಾವ್ ಜಾರಕಿಹೂಳಿ ರವರ ಪಾತ್ರವು ಇಲ್ಲಿ ಸ್ಮರಿಸಬೇಕು.

ಕನ್ನಡ ನಾಡು ನುಡಿ ಭಾಷೆ ಹೆಚ್ಚಿನ ಆಸಕ್ತಿ ತುಂಬಿದ ಗಡಿನಾಡು ನಮ್ಮ ಉತ್ತರ ಕನ್ನಡಿಗರದು ಇಲ್ಲಿ ಜಾರಕಿಹೂಳಿ ಅವರ ಕುಟುಂಬದ ಹೋರಾಟದ ಫಲವೇ ಯಶಸ್ಸಿನ ಸಂಕೇತ. ಹಾಗಾಗಿ ಸಂಸ್ಕೃತಿ ಉಳಿಸಲು ನಿಟ್ಟಿನಲ್ಲಿ ಇಂದಿನ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರಾದ ಸತೀಶ್ ಜಾರಕಿಹೂಳಿ ಅವರು ಪ್ರತಿವರ್ಷ ವಿವಿಧ ಕ್ರೀಡೆಗಳು ಹಾಗೂ ಸತೀಶ್ ಶೂಗರ್ಸ್ ಅವಾರ್ಡ್ಸ್ ನ ಕ್ರೀಡೆ. ಸಂಸ್ಕೃತಿಕ ಕಾರ್ಯಕ್ರಮಗಳು. ಬಾಡಿ ಬಿಲ್ಡರ್ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬುದ್ದ, ಬಸವ, ಅಂಬೇಡ್ಕರ್ ಅವರ ಮೌಢ್ಯತೆ ಅರಿವೂ ಮೂಡಿಸುವ ಕಾರ್ಯಕ್ರಮ ಸ್ಮಶಾನದಲ್ಲಿ ಏರ್ಪಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಈ ಜನನಾಯಕರಾದ ಸತೀಶ್ ಜಾರಕಿಹೂಳಿ ಅವರು ನೆರವೇರಿಸುತ್ತಾ ಬಂದಿರುತ್ತಾರೆ.

ದಲಿತ ಸಮಾಜದ ಮಕ್ಕಳಿಗೆ ದಾವಣಗೆರೆಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಮಕ್ಕಳಿಗೆ ಸುಮಾರೂ 50 ಸಾವಿರದಿಂದ 1ಲಕ್ಷದ ವರೆಗೆ ಪ್ರೋತ್ಸಾಹ ಧನ ನೀಡುತ್ತಾ ಬಂದಿರುತ್ತಾರೆ. ಈ ಎಲ್ಲಾ ಸಮಾಜ ಸೇವೆ ಮಾಡುತ್ತಾ ಬಂದಿರುವ ನಿಜವಾದ ಜನ ನಾಯಕರಾದ ಸತೀಶ್ ಜಾರಕಿಹೂಳಿ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸ ಬೇಕೆಂದು ಜೀ ಕಲರ್ಸ್ ಕನ್ನಡ ಮುಖ್ಯವಾಹಿನಿ ಸಂಸ್ಥಾಪಕರಲ್ಲಿ ಅವರ ಅಭಿಮಾನಿಗಳಾದ ನಾವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಎಂದು ಪೊಸ್ಟ್ ಮಾಡಿರುವ ಅಭಿಮಾನಿ ವಿಜಯ ತಳವಾರ ಪೊಸ್ಟ ಈಗ ಸಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ






Last Updated : Apr 30, 2019, 9:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.