ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ‘ಸರಸು’ 150 ಸಂಚಿಕೆಗಳನ್ನು ದಾಟಿದೆ. ಧಾರಾವಾಹಿಯಲ್ಲಿ ನಟಿ ಸುಪ್ರಿತಾ ಸತ್ಯನಾರಾಯಣ್ ಮತ್ತು ನಟ ಸ್ಕಂದ ಅಶೋಕ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಗರಕ್ಕೆ ಬಂದು, ನಂತರ ಇಲ್ಲಿನ ಕಾಲೇಜಿಗೆ ಸೇರಿಕೊಂಡು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುವ ಸರಸು ಎಂಬ ಹಳ್ಳಿ ಹುಡುಗಿಯ ಸುತ್ತ ಸುತ್ತುವ ಈ ಧಾರಾವಾಹಿಗೆ ವೀಕ್ಷಕರಿಂದ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸರಸು ಬಂಗಾಳಿ ಧಾರಾವಾಹಿ ರಿಮೇಕ್ ಆಗಿದ್ದರೂ ನಮ್ಮ ನೇಟಿವಿಟಿಗೆ ಅನುಗುಣವಾಗಿ ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದು ಪ್ರೇಕ್ಷಕರಿಗೂ ಬಹಳ ಇಷ್ಟವಾಗಿದೆ.
ಧಾರಾವಾಹಿಯಲ್ಲಿ ನಟ ಸ್ಕಂದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲು ಬಯಸುವ ಶಿಕ್ಷಣ ತಜ್ಞನ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕ ಚಿಕ್ಕವನಿದ್ದಾಗಲೇ ತಾಯಿ ಕುಟುಂಬವನ್ನು ತೊರೆದಾಗ, ಆತನನ್ನು ಅವರ ತಂದೆ ಬೆಳೆಸುತ್ತಾರೆ. ಅಂದಹಾಗೆ ಸರಸು ಧಾರಾವಾಹಿ ಮೊದಲ ಲಾಕ್ಡೌನ್ ನಂತರ ಪ್ರಸಾರವಾಯಿತು.
ಧಾರಾವಾಹಿಯ ನಾಯಕಿ ಸುಪ್ರಿತಾ ಸತ್ಯನಾರಾಯಣ್ಗೆ ಇತ್ತೀಚೆಗೆ ಕೋವಿಡ್ ಸೋಂಕು ಇರುವುದು ಧೃಢಪಟ್ಟಿತ್ತು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಲಾಕ್ಡೌನ್ ಕಾರಣ ಧಾರಾವಾಹಿಗಳ ಚಿತ್ರೀಕರಣ ನಿಲ್ಲಿಸಿರುವುದರಿಂದ ಅವರು ಚಾಮರಾಜನಗರದಲ್ಲಿರುವ ತಮ್ಮ ಅಜ್ಜ - ಅಜ್ಜಿ ಗ್ರಾಮದಲ್ಲಿ ತಂಗಿದ್ದಾರೆ. ಸ್ಕಂದ ಅವರು ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ತಮ್ಮ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪ್ರಧಾನವಾಗಿ ಚಿತ್ರೀಕರಣಗೊಂಡಿರುವ ಮುಂಬರುವ ಕಸ್ತೂರಿ ನಿವಾಸ ಚಿತ್ರದಲ್ಲೂ ಸ್ಕಂದ ಅವರು ಕಾಣಿಸಿಕೊಳ್ಳಲಿದ್ದಾರೆ. ಶಾನ್ವಿ ಶ್ರೀವಾಸ್ತವ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಚಿತ್ರೀಕರಣವನ್ನು ನಿರ್ಮಾಪಕರು ಪೂರ್ಣಗೊಳಿಸಿದ್ದಾರೆ. ಈ ಚಿತ್ರವನ್ನು ದಿನೇಶ್ ಬಾಬು ನಿರ್ದೇಶನ ಮಾಡಿದ್ದಾರೆ.