ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆ ಮಾಡಿದ್ದ ಮಾಜಿ ಯೋಧ ತೇಜ್ ಬಹುದ್ದೂರ್ ಯಾದವ್ ನಾಮಪತ್ರ ತಿರಸ್ಕೃತಗೊಂಡಿದೆ.
ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ತೇಜ್ ಬಹುದ್ದೂರ್ ಯಾದವ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇವರ ನಾಮಪತ್ರ ಪರಿಶೀಲನೆ ನಡೆಸಿರುವ ಅಲ್ಲಿನ ಜಿಲ್ಲಾಧಿಕಾರಿ ವಜಾಗೊಳಿಸಿದ್ದಾಗಿ ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ತೇಜ್ ಬಹುದ್ದೂರ್, ಅವರು ಕೇಳಿರುವ ಎಲ್ಲ ದಾಖಲೆಗಳನ್ನ ನಾನು ನಾಮಪತ್ರ ಸಲ್ಲಿಕೆ ವೇಳೆ ನೀಡಿರುವೆ. ಆದರೆ, ಯಾವುದೇ ಕಾರಣವಿಲ್ಲದೇ ಅವರು ನನ್ನ ನಾಮಪತ್ರ ತಿರಸ್ಕೃತಗೊಳಿಸಿದ್ದಾರೆ ಎಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ತೇಜ್ ಬಹುದ್ದೂರ್ ಪರ ವಕೀಲ ರಾಜೇಶ್ ಗುಪ್ತಾ ಮಾತನಾಡಿದ್ದು, ಚುನಾವಣಾಧಿಕಾರಿಗಳು ಕೇಳಿರುವ ಎಲ್ಲ ಮೂಲ ದಾಖಲಾತಿ ನೀಡಲಾಗಿದ್ದು, ಇದರ ಮಧ್ಯೆ ನಾಮಪತ್ರ ತಿರಸ್ಕರಿಸಿದ್ದಾರೆ. ಇದನ್ನ ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್ನ ಮೊರೆ ಹೋಗುತ್ತೇವೆ ಅಂತಾ ಹೇಳಿದ್ದಾರೆ.
-
Rajesh Gupta, Tej Bahadur Yadav's lawyer: We had submitted the evidence that was asked from us. Still, the nomination was declared invalid. We will go to the Supreme Court. pic.twitter.com/erLdG6N7up
— ANI UP (@ANINewsUP) May 1, 2019 " class="align-text-top noRightClick twitterSection" data="
">Rajesh Gupta, Tej Bahadur Yadav's lawyer: We had submitted the evidence that was asked from us. Still, the nomination was declared invalid. We will go to the Supreme Court. pic.twitter.com/erLdG6N7up
— ANI UP (@ANINewsUP) May 1, 2019Rajesh Gupta, Tej Bahadur Yadav's lawyer: We had submitted the evidence that was asked from us. Still, the nomination was declared invalid. We will go to the Supreme Court. pic.twitter.com/erLdG6N7up
— ANI UP (@ANINewsUP) May 1, 2019
ಜವಾನ್ v/s ಚೌಕಿದಾರ್ : ಪಿಎಂ ವಿರುದ್ಧ ಸೆಣೆಸಲು ಸೈಕಲ್ ಏರಿದ ಮಾಜಿ ಯೋಧ ತೇಜ್ ಬಹದ್ದೂರ್!
ಹರಿಯಾಣದ ನಿವಾಸಿ ತೇಜ್ ಬಹದ್ದೂರ್ ಯಾದವ್, 2017ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯೋಧರಿಗೆ ನೀಡುವ ಕಳಪೆ ಆಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಅವರನ್ನ ಸೇನೆಯಿಂದ ವಜಾಗೊಳಿಸಲಾಗಿತ್ತು. ಅದಾದ ಬಳಿಕ ವಾರಣಾಸಿ ಕ್ಷೇತ್ರದಿಂದ ಸ್ಫರ್ಧೆ ಮಾಡುವ ಇಂಗಿತವನ್ನು ತೇಜ್ ಬಹುದ್ದೂರ್ ವ್ಯಕ್ತಪಡಿಸಿದ್ದರು. ಅವರಿಗೆ ಎಸ್ಪಿ-ಬಿಎಸ್ಪಿ ಮೈತ್ರಿಯಾಗಿ ಟಿಕೆಟ್ ನೀಡಿ ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿಸಲಾಗಿತ್ತು. ಈಗ ತೇಜ್ ಪ್ರತಾಪ್ ಯಾದವ್ ನಾಮಪತ್ರ ತಿರಸ್ಕೃತಗೊಂಡಿರುವುದು ದೇಶದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.