ETV Bharat / briefs

ಕುತೂಹಲ ಕೆರಳಿಸಿದ ಮಾಯಾ- ಅಖಿಲೇಶ್ ಭೇಟಿ..! ಸೋನಿಯಾ ಭೇಟಿ ಮುಂದೂಡಿದ್ದೇಕೆ? - ಅಖಿಲೇಶ್

ಇನ್ನು ಬಹುತೇಕ ಎಕ್ಸಿಟ್​ ಪೋಲ್​ಗಳು ಉತ್ತರಪ್ರದೇಶದಲ್ಲಿ ಮೈತ್ರಿಗೆ ಬಿಗ್​ ಬೂಸ್ಟ್​ ಸಿಗಲಿದೆ ಎಂದು ಹೇಳಿರುವುದು ಮಾಜಿ ಸಿಎಂಗಳಾದ ಅಖಿಲೇಶ್​ ಹಾಗೂ ಮಾಯಾವತಿ ಅವರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

ಭೇಟಿ
author img

By

Published : May 20, 2019, 1:36 PM IST

ಲಖನೌ: ಏಳನೇ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಇತ್ತ ಚುನಾವಣೋತ್ತರ ಫಲಿತಾಂಶಗಳು ಹೊರ ಬಿದ್ದಿದ್ದು, ಉತ್ತರ ಪ್ರದೇಶದಲ್ಲಿ ಅಖಿಲೇಶ್​ - ಮಾಯಾವತಿ ಮೈತ್ರಿಕೂಟಕ್ಕೆ ಭಾರಿ ಬೂಸ್ಟ್​​ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಮಹತ್ವದ ಸಭೆ ನಡೆಸಿದ್ದಾರೆ.

ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಇಬ್ಬರು ನಾಯಕರ ಭೇಟಿಯೂ ತೀವ್ರ ಕುತೂಹಲ ಕೆರಳಿಸಿದೆ. ಇದಕ್ಕೂ ಮುನ್ನ ಈ ಇಬ್ಬರು ನಾಯಕರನ್ನು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಹಾಘಟಬಂಧನ್​ ಇಲ್ಲವೇ ತೃತೀಯ ರಂಗ ರಚನೆಗೆ ಮಾತುಕತೆ ನಡೆಸಿದ್ದರು.

ಆದರೆ, 7ನೇ ಹಂತದ ಹಾಗೂ ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಪ್ರಕಟವಾದ ಚುನಾವಣೋತ್ತರ ಫಲಿತಾಂಶ ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೆ ಹಿನ್ನಡೆಯನ್ನು ಸೂಚಿಸಿವೆ. ಇದು ಮಹಾಘಟಬಂಧನ್​ ಸಂಚಾಲಕನಿಗೆ ಹಿನ್ನಡೆಯನ್ನುಂಟು ಮಾಡಿದೆ ಎಂದೂ ಹೇಳಲಾಗುತ್ತಿದೆ. ​

ಹೆಚ್ಚಿನ ಓದಿಗಾಗಿ:

ಸೋನಿಯಾ-ಮಾಯಾ ಭೇಟಿ ಇಲ್ಲ...! ಸ್ಪಷ್ಟನೆ ನೀಡಿದ ಬಿಎಸ್​ಪಿ ನಾಯಕ

ಇನ್ನು ಬಹುತೇಕ ಎಕ್ಸಿಟ್​ ಪೋಲ್​ಗಳು ಉತ್ತರಪ್ರದೇಶದಲ್ಲಿ ಮೈತ್ರಿಗೆ ಬಿಗ್​ ಬೂಸ್ಟ್​ ಸಿಗಲಿದೆ ಎಂದು ಹೇಳಿರುವುದು ಮಾಜಿ ಸಿಎಂಗಳಾದ ಅಖಿಲೇಶ್​ ಹಾಗೂ ಮಾಯಾವತಿ ಅವರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

2014 ರಲ್ಲಿ 80ರಲ್ಲಿ 73 ಸ್ಥಾನಗಳನ್ನ ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಮೈತ್ರಿಕೂಟ ಹೊಡೆತ ನೀಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕಳೆದ ಚುನಾವಣೆಯಲ್ಲಿ ಬಿಎಸ್​​ಪಿ ಒಂದೇ ಒಂದು ಚುನಾವಣೆ ಗೆಲ್ಲಲು ವಿಫಲವಾಗಿತ್ತು. ಹೀಗಾಗಿ 30 ವರ್ಷಗಳ ಬಳಿಕ ಬದ್ಧ ವೈರಿಗಳು ಬಂದಾಗಿ ಚುನಾವಣೆ ಎದುರಿಸಿದ್ದರು. ಇದು ಚುನಾವಣೆಯಲ್ಲಿ ಫಲ ಕೊಡುವ ಎಲ್ಲ ಸಾಧ್ಯತೆಗಳು ಇವೆ. ಹೀಗಾಗಿಯೇ ಉಭಯ ನಾಯಕರ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ.

Intro:Body:

ಕುತೂಹಲ ಕೆರಳಿಸಿದ ಮಾಯಾ- ಅಖಿಲೇಶ್ ಭೇಟಿ..! ಸೋನಿಯಾ ಭೇಟಿ ಮುಂದೂಡಿದ್ದೇಕೆ? 

ಲಖನೌ:  7ನೇ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಇತ್ತ ಚುನಾವಣೋತ್ತರ ಫಲಿತಾಂಶಗಳು ಹೊರ ಬಿದ್ದಿದ್ದು, ಉತ್ತರ ಪ್ರದೇಶದಲ್ಲಿ ಅಖಿಲೇಶ್​ - ಮಾಯಾವತಿ ಮೈತ್ರಿಕೂಟಕ್ಕೆ ಭಾರಿ ಬೂಸ್ಟ್​​ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಮಹತ್ವದ ಸಭೆ ನಡೆಸಿದರು. 

ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಇಬ್ಬರು ನಾಯಕರ ಭೇಟಿಯೂ ತೀವ್ರ ಕುತೂಹಲ ಕೆರಳಿಸಿದೆ.   ಇದಕ್ಕೂ ಮುನ್ನ  ಈ ಇಬ್ಬರು ನಾಯಕರನ್ನು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು  ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಹಾಘಟಬಂಧನ್​ ಇಲ್ಲವೇ ತೃತೀಯ ರಂಗ ರಚನೆಗೆ ಮಾತುಕತೆ ನಡೆಸಿದ್ದರು.  

ಆದರೆ, 7ನೇ ಹಂತದ ಹಾಗೂ ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ  ಪ್ರಕಟವಾದ ಚುನಾವಣೋತ್ತರ ಫಲಿತಾಂಶ ಆಂಧ್ರದಲ್ಲಿ ಚಂದ್ರಬಾಬು ನಾಯ್ಡುಗೆ ಹಿನ್ನಡೆಯನ್ನು ಸೂಚಿಸಿವೆ.  ಇದು ಮಹಾಘಟಬಂಧನ್​ ಸಂಚಾಲಕನಿಗೆ ಹಿನ್ನಡೆಯನ್ನುಂಟು ಮಾಡಿದೆ ಎಂದೂ ಹೇಳಲಾಗುತ್ತಿದೆ.  

    ​ 

ಇನ್ನು  ಬಹುತೇಕ ಎಕ್ಸಿಟ್​ ಪೋಲ್​ಗಳು ಉತ್ತರಪ್ರದೇಶದಲ್ಲಿ ಮೈತ್ರಿಗೆ ಬಿಗ್​ ಬೂಸ್ಟ್​ ಸಿಗಲಿದೆ ಎಂದು ಹೇಳಿರುವುದು ಮಾಜಿ ಸಿಎಂಗಳಾದ ಅಖಿಲೇಶ್​ ಹಾಗೂ ಮಾಯಾವತಿ ಅವರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. 

 2014 ರಲ್ಲಿ 80ರಲ್ಲಿ 73 ಸ್ಥಾನಗಳನ್ನ ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಮೈತ್ರಿಕೂಟ ಹೊಡೆತ ನೀಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕಳೆದ ಚುನಾವಣೆಯಲ್ಲಿ ಬಿಎಸ್​​ಪಿ ಒಂದೇ ಒಂದು ಚುನಾವಣೆ ಗೆಲ್ಲಲು ವಿಫಲವಾಗಿತ್ತು.  ಹೀಗಾಗಿ 30 ವರ್ಷಗಳ ಬಳಿಕ ಬದ್ಧ ವೈರಿಗಳು ಬಂದಾಗಿ ಚುನಾವಣೆ ಎದುರಿಸಿದ್ದರು. ಇದು ಚುನಾವಣೆಯಲ್ಲಿ ಫಲ ಕೊಡುವ ಎಲ್ಲ ಸಾಧ್ಯತೆಗಳು ಇವೆ.  ಹೀಗಾಗಿಯೇ ಉಭಯ ನಾಯಕರ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.