ಮುಂಬೈ: ಕ್ರಿಕೆಟ್ ಅನ್ನು ಧರ್ಮವಾಗಿ, ಸಚಿನ್ ತೆಂಡೂಲ್ಕರ್ ಅನ್ನು ದೇವರಾಗಿ ಪರಿಗಣಿಸಿರುವ ಭಾರತ ದೇಶದಲ್ಲಿ ಸಚಿನ್ ತೆಂಡುಲ್ಕರ್ ಅಪರೂಪದ ಹಾಗೂ ಪ್ರಶಂಸನೀಯ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಕ್ಷೌರಿಕ ಶಾಪ್ಗೆ ತೆರಳಿ ಶೇವಿಂಗ್ ಮಾಡಿಸಿಕೊಂಡಿದ್ದಾರೆ. ಇದ್ರಲ್ಲೇನು ವಿಶೇಷ ಇದ್ಯಾಪ್ಪಾ..? ಅನ್ನೋರು ಮುಂದಕ್ಕೆ ಓದ್ಲೇಬೇಕು...
ವಿಶೇಷವೆಂದರೆ ಇಲ್ಲಿ ತನಕ ಸಚಿನ್ ಬೇರೆಯವರಿಂದ ಶೇವ್ ಮಾಡಿಸಿಕೊಂಡಿಲ್ಲವಂತೆ. ಸಚಿನ್ಗೆ ಶೇವ್ ಮಾಡಿರೋದು ಮಹಿಳಾ ಮಣಿ ಎನ್ನುವುದು ಎಲ್ಲದಕ್ಕಿಂತ ಇಂಟ್ರೆಸ್ಟಿಂಗ್ ಮ್ಯಾಟರ್..!
- " class="align-text-top noRightClick twitterSection" data="
">
ಸಚಿನ್ ಶೇವ್ ಮಾಡಿಸಿಕೊಂಡು ಸೀದಾ ಮನೆ ಹಾದಿ ಹಿಡಿದಿಲ್ಲ. ಶೇವ್ ಮಾಡಿದ ಯುವತಿಗೆ ಜಿಲೆಟ್ ಇಂಡಿಯಾದ ಸ್ಕಾಲರ್ಶಿಪ್ ನೀಡಿದ್ದಾರೆ.
ಸಚಿನ್ ತೆಂಡೂಲ್ಕರ್ ಶೇವಿಂಗ್ ಮಾಡಿಸಿಕೊಳ್ಳುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. #ShavingStereotypes(ಮೂಢನಂಬಿಕೆಗೆ ಕತ್ತರಿ) #DreamsDontDiscriminate(ಕನಸುಗಳ ತಾರತಮ್ಯ ಬೇಡ) ಎನ್ನುವ ವಿಶೇಷ ಹ್ಯಾಶ್ಟ್ಯಾಗ್ ನೀಡಿದ್ದಾರೆ.